ಕಲಬುರಗಿ ಕಿರುಕುಳ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಣೆ
Update: 2016-07-09 11:19 IST
ಬೆಂಗಳೂರು, ಜುಲೈ 9: ಕಲಬುರಗಿ ನರ್ಸಿಂಗ್ ಕಾಲೇಜಿನಲ್ಲಿ ಕೇರಳದ ದಲಿತ ವಿದ್ಯಾರ್ಥಿನಿ ಅಶ್ವತಿಗೆ ಕಿರುಕುಳ ನೀಡಿದ ಪ್ರಕರಣದ ಒಂದನೆ,ಎರಡನೆ ಆರೋಪಿಗಳಿಗೆ ಕೋರ್ಟು ಜಾಮೀನು ನಿರಾಕರಿಸಿದೆ. ಮೂರನೆ ಆರೋಪಿ ಇಡುಕ್ಕಿಯ ಕೃಷ್ಣಪ್ರಿಯಗೆ ಕೋರ್ಟು ಜಾಮೀನು ನೀಡಿದೆ. ಅಡಿಷನಲ್ ಸೆಷನ್ಸ್‌ಕೋರ್ಟ್ ನ್ಯಾಯಾಧೀಶೆ ಪ್ರೇಮಾವತಿ ಮನಗೋಳಿ ಕೇಸು ವಿಚಾರಣೆ ನಡೆಸುತ್ತಿದ್ದಾರೆ.
ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವತಿ, ಸಂಬಂಧಿಕರು. ವೈದ್ಯರಿಂದ ಕಲಬುರಗಿ ಡಿವೈಎಸ್ಪಿ ಎ.ಎಸ್, ಝಾನ್ವಿ ಹೇಳಿಕೆ ಪಡೆದಿದ್ದರು.