ಭಾರತೀಯ ದನಗಳು ಮಾತ್ರ ಗೋಮಾತೆ ! : ಗುಜರಾತ್‌ನ ಗೋಶಾಲೆಯ ಹೇಳಿಕೆ
ಅಹ್ಮದಾಬಾದ್,ಜುಲೈ 9: ಹಾಲು ಕೊಡುವ ಎಲ್ಲ ಹಸುಗಳನ್ನು ಗೋಮಾತೆಯಾಗಿ ಪರಿಗಣಿಸಬೇಕಾಗಿಲ್ಲ ಎಂದು ಗುಜರಾತ್‌ನ ಗೋಶಾಲೆಗಳು ವಾದಿಸುತ್ತಿವೆ. ಭಾರತೀಯ ಹಸುಗಳಿಗೆ ಮಾತ್ರವೇ ಈ ಪರಿಗಣನೆ ನೀಡಬೇಕಾಗಿದೆ. ಜರ್ಸಿತಳಿಯ ಮಿಶ್ರ ಜಾತಿ ಹಸುಗಳು ಮತ್ತು ಆಮದು ಮಾಡಿಕೊಳ್ಳುವ ಹಸುಗಳನ್ನು ಮಾತೆ ಎಂದು ಕರೆಯಬೇಕಿಲ್ಲ ಎಂದು ಅಹ್ಮದಾಬಾದ್ ಆನಂದ್ ನಗರದ ಬಕ್ರೋಲ್ ಗ್ರಾಮದ ಬಾನ್ಸೂರಿ ಗೋಶಾಲೆ ಕರೆ ನೀಡಿದೆ.ಇದಕ್ಕೆ ಸಂಬಂಧಿಸಿ ಬ್ಯಾನರ್‌ಗಳು ಜಾಹೀರಾತು ಫಲಕಗಳು ನಗರದಲ್ಲಿ ರಾರಾಜಿಸುತ್ತಿವೆ.
ಭಾರತೀಯ ಹಸುಗಳನ್ನು ಸಾಕುವುದು ಪುಣ್ಯ ಕೆಲಸವಾಗಿ ಭಾವಿಸಬೇಕಾಗಿದೆ. ಜರ್ಸಿ ತಳಿಯನ್ನು ಹಾಲು ಕೊಡುವ ಪ್ರಾಣಿಯೆಂದು ಮಾತ್ರ ಭಾವಿಸಿದರೆ ಸಾಕು ಎಂದು ಬ್ಯಾನರ್‌ಗಳು ಹೇಳುತ್ತಿವೆ. ಭಾರತೀಯ ಹಸುಗಳ ಹಾಲು, ಮೂತ್ರ, ಸೆಗಣಿಗೆ ಮಾತ್ರ ಔಷಧೀಯ ಗುಣಗಳಿವೆ. ವಿದೇಶಿ-ಮಿಶ್ರ ತಳಿಯ ಹಸುಗಳಿಗೆ ಇಂತಹ ಗುಣಗಳಿಲ್ಲ ಎಂದು ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ.
ಜರ್ಸಿತಳಿಹೆಚ್ಚು ಹಾಲು ಕೊಡುವುದಿದ್ದರೂ ಅವುಗಳ ಹಾಲಿಗೆ ಕಡಿಮೆ ಗುಣಮಟ್ಟವಾಗಿದೆ.ಭಾರತೀಯ ಹಸುಗಳ ಹಾಲಿಗೆ ಮನುಷ್ಯರ ಆರೋಗ್ಯಕ್ಕೆ ಉಪಯುಕ್ತವಾದ ಅಂಶಗಳಿವೆ. ಮಿಶ್ರತಳಿಯ ಹಸುಗಳ ಹಾಲಿನಲ್ಲಿ ಹಾನಿಕಾರಕ ಅಂಶಗಳಿವೆ ಎಂದೂ ಹೇಳಲಾಗಿದೆ. ಅಹ್ಮದಾಬಾದ್‌ನ ಜಗನ್ನಾಥ ದೇವಳದಿಂದ ಪ್ರಚಾರ ಆರಂಭಗೊಳ್ಳಲಿರುವ ರಸ್ತೆಗಳ ಬದಿಗಳಲ್ಲಿ ಗೋಶಾಲೆಗಳ ವತಿಯಿಂದ ಇಂತಹ ಬ್ಯಾನರ್‌ಗಳನ್ನು ಹಾಕಲಾಗಿದೆ. ತಮ್ಮ ವತಿಯಿಂದ ಇಂತಹ ಆರು ಜಾಹೀರಾತು ಫಲಕಗಳನ್ನು ಹಾಕಲಾಗಿದೆ ಎಂದು ಬಾನ್ಸೂರಿ ಗೋಶಾಲೆಯ ಮಾಲಕ ರಾಜು ಪಟೇಲ್ ಹೇಳಿದ್ದಾರೆ.