×
Ad

ಗೋರಿಯೊಳಗಿನಿಂದ ಈಧಿ ನಿಧನದ ಸುದ್ದಿಯನ್ನು ವರದಿ ಮಾಡಿದ ಪಾಕ್ ನ್ಯೂಸ್ ಚ್ಯಾನಲ್ ಇಕ್ಕಟ್ಟಿನಲ್ಲಿ

Update: 2016-07-10 11:41 IST

  ಇಸ್ಲಾಮಾಬಾದ್,ಜುಲೈ 10: ಬಡವರ ಸೇವೆಗಾಗಿ ಜೀವನ ಮುಡಿಪಾಗಿಟ್ಟ ಅಬ್ದುಲ್ ಸತ್ತಾರ್ ಈಧಿ ನಿಧನದಿಂದ ಇಡೀ ಜಗತ್ತೇಶೋಕದಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ನ್ಯೂಸ್ ಚ್ಯಾನೆಲೊಂದು ಅವರ ನಿಧನ ಸುದ್ದಿಯನ್ನು ಗೋರಿಯೊಳಗಿನಿಂದ ಪ್ರಸಾರ ಮಾಡಿ ವೀಕ್ಷಕರನ್ನು ಚಕಿತಗೊಳಿಸಿದೆ ಎಂದು ವರದಿಯಾಗಿದೆ.

  ವರದಿಯಾಗಿರುವ ಪ್ರಕಾರ ನ್ಯೂಸ್ ಎಕ್ಸ್‌ಪ್ರೆಸ್‌ನ ವರದಿಗಾರ ಈಧಿಯ ಗೋರಿಯೊಳಗೆ ಮಲಗಿ ಅವರ ನಿಧನರಾದ ಸುದ್ದಿಯನ್ನು ವರದಿ ಮಾಡಿದ್ದಾನೆನ್ನಲಾಗಿದೆ. ಈತ ವರದಿ ಮಾಡುತ್ತಿರುವ  ಫೋಟೊ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿದ್ದು ಜನರ ಅಚ್ಚರಿಯ ಪ್ರತಿಕ್ರಿಯೆಗೂ ಕಾರಣವಾಗಿದೆ. ಕೆಲವರು ಈ ಗೋರಿ ಈಧಿಯವರ ಗ್ರಾಮದಲ್ಲಿ ಅವರಿಗಾಗಿ ಇಪ್ಪತ್ತೈದು ವರ್ಷಗಳ ಮೊದಲು ತೋಡಲಾಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದರೆ. ಕೆಲವರು ಇಂತಹ ವರದಿ ಬಹಳ ದುರದೃಷ್ಟಕರವಾದದ್ದೆಂದು ಬೇಸರ ವ್ಯಕ್ತಪಡಿಸಿದ್ದಾರೆಂದು ವರಿದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News