ಟ್ವಿಟ್ಟರ್ ಸಿಇಓ ಜಾಕ್ಸ್ ದೊರ್ಸೆ ಖಾತೆಯೇ ಹ್ಯಾಕ್!
Update: 2016-07-10 13:45 IST
ಮತ್ತೊಬ್ಬ ಗಣ್ಯರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಈ ಬಾರಿ ಹ್ಯಾಕರ್ ಗಳ ಕೈಚಳಕಕ್ಕೆ ಗುರಿಯಾದದ್ದು ಬೇರೆ ಯಾರ ಖಾತೆಯೂ ಅಲ್ಲ; ಸ್ವತಃ ಕಂಪನಿಯ ಸಿಇಓ ಜಾಕ್ ದೊರ್ಸೆ ಅವರ ಖಾತೆಯೇ ಹ್ಯಾಕ್ ಆಗಿದೆ.
ದೊರ್ಸೆಯವರ ಖಾತೆಯನ್ನು ಸಂಕ್ಷಿಪ್ತವಾಗಿ ಹ್ಯಾಕ್ ಮಾಡಲಾಗಿದೆ. ಅವರ್ ಮೈನ್ ಎಂಬ ಹ್ಯಾಕರ್ ಗ್ರೂಪ್ ಇತ್ತೀಚಿನ ದಿನಗಳಲ್ಲಿ ಹೈ ಪ್ರೊಫೈಲ್ ವ್ಯಕ್ತಿಗಳ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದು, ಇದೇ ಗುಂಪು ದೊರ್ಸೆ ಖಾತೆಯನ್ನೂ ಹ್ಯಾಕ್ ಮಾಡಿದೆ.
ಗೂಗಲ್ ಸಿಇಓ ಸುಂದರ್ ಪಿಚೈ ಹಾಗೂ ಮಾರ್ಕ್ ಜುಕೆರ್ ಬರ್ಗ್ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನೂ ಹ್ಯಾಕ್ ಮಾಡಿದ್ದ ಈ ಗುಂಪು, ಕೆಲ ವಿಡಿಯೊಗಳನ್ನು ಷೇರ್ ಮಾಡಿ, ಬಳಿಕ "ಹೇ ನಾವು ಅವರ್ ಮೈನ್; ನಮ್ಮ ಭದ್ರತಾ ಅಂಶಗಳನ್ನು ನಾವು ಪರೀಕ್ಷಿಸುತ್ತಿದ್ದೇವೆ" ಎಂದು ಟ್ವೀಟ್ ಮಾಡಿತ್ತು.
ಇದನ್ನು ಬಳಿಕ ಡಿಲೀಟ್ ಮಾಡಲಾಗಿತ್ತಾದರೂ, ಅದರ ವೆಬ್ಲಿಂಕ್ ಅವರ್ ಮೈನ್ ವೆಬ್ಸೈಟ್ ಗೆ ಸಂಪರ್ಕಿಸುತ್ತಿತ್ತು.