×
Ad

ದಕ್ಷಿಣ ಸುಡಾನ್‌ನಲ್ಲಿ ಆಂತರಿಕ ಸಂಘರ್ಷ : 115 ಮಂದಿ ಮೃತ್ಯು

Update: 2016-07-10 14:26 IST

ಜೂಬ,ಜುಲೈ 10: ದಕ್ಷಿಣ ಸುಡಾನ್‌ನಲ್ಲಿ ಸ್ವಾತಂತ್ರ್ಯ ದಿನದಂದು ಸಂಭವಿಸಿದ ಘರ್ಷಣೆಯಲ್ಲಿ 150 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಅಧ್ಯಕ್ಷ ಸಾಲ್ವ ಕೀರ್ ಬೆಂಬಲಿಗರು ಮತ್ತು ಭಿನ್ನಮತೀಯ ನಾಯಕ ಹಾಗೂ ಉಪಾಧ್ಯಕ್ಷ ರಿಯಕ್ ಮಚರ್‌ರ ಬೆಂಬಲಿಗರ ನಡುವೆ ಶುಕ್ರವಾರ ಆರಂಭವಾಗಿದ್ದ ಘರ್ಷಣೆ ಶನಿವಾರದವರೆಗೂ ಮುಂದುವರಿದಿತ್ತು. ಆಕ್ರಮಿಗಳು ಜನಸಾಮಾನ್ಯರನ್ನು ಗುರಿಯಾಗಿಟ್ಟಿದ್ದರೆಂದು ಸುಡಾನ್‌ನ ಜನರಲ್ ಸ್ಟಾಫ್ ಚೀಫ್ ವಕ್ತಾರ ತಿಳಿಸಿದ್ದಾರೆ. ಸಮಸ್ಯೆ ಪರಿಹಾರಕ್ಕಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದಾಗ ಘರ್ಷಣೆ ಸಂಭವಿಸಿದೆಯೆನ್ನಲಾಗಿದೆ.

2011ರಲ್ಲಿ ಸುಡಾನ್‌ನಿಂದ ಬೇರ್ಪಟ್ಟು ದಕ್ಷಿಣ ಸುಡಾನ್ ರಾಷ್ಟ್ರ ಸ್ಥಾಪನೆಯಾಗಿತ್ತು. ಆದರೆ ಅಧಿಕಾರಕ್ಕಾಗಿ ದೇಶದಲ್ಲಿ ಗೃಹಯುದ್ಧ ಪರಾಕಾಷ್ಠೆಗೇರಿತ್ತು. ಆಂತರಿಕ ಸಂಘರ್ಷದಲ್ಲಿ ಈವರೆಗೆ 50,000 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಐದು ಲಕ್ಷ ಮಂದಿ ಆಹಾರ ಸಿಗದೆ ಕಡುಬಡತನದಲ್ಲಿ ಜೀವಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News