ಗೂಳಿ ಕಾದಾಟ ಪರಿಣತ ವಿಕ್ಟರ್ ಬಾರಿಯೊ ಗೂಳಿತಿವಿತದಿಂದ ಸಾವು
ಮ್ಯಾಡ್ರಿಡ್,ಜುಲೈ 10; ಗೂಳಿ ಕಾದಾಟದ ತಜ್ಞ ವಿಕ್ಟರ್ ಬಾರಿಯೊ ಸ್ಪರ್ಧೆಯ ವೇಳೆ ಗೂಳಿಯೊಂದರ ತಿವಿತಕ್ಕೊಳಗಾಗಿ ಮೃತರಾಗಿದ್ದಾರೆ.ಶುಕ್ರವಾರ ಸ್ಪೈನ್‌ನ ಟೆರುವಿನಲ್ಲಿ ಘಟನೆ ನಡೆದಿದ್ದು ಆ ವೇಳೆ ಟೆಲಿವಿಷನ್ ನೇರ ಪ್ರಸಾರ ನಡೆಯುತ್ತಿತ್ತು. ಗೂಳಿಕಾಳಗದ ನಾಡಾಗಿರುವ ಸ್ಪೈನ್‌ನಲ್ಲಿ ಗೂಳಿಕಾಳಗದಲ್ಲಿ ಸಾವನ್ನಪ್ಪುವ ಘಟನೆ ಸಾಮಾನ್ಯವಾಗಿದೆ. 1985ರಲ್ಲಿ ಜೋಸ್ ಕುಬೋರೊ ಗೂಳಿಕಾಳಗದಲ್ಲಿ ಮೃತರಾಗಿದ್ದರು. ಗೂಳಿಕಾಳಗದ ವೇಳೆ ಗೂಳಿ ವಿಕ್ಟರ್ ಬಾರಿಯೊರನ್ನು ಕೊಂಬಿನಿಂದ ಎತ್ತಿ ಎಸೆದಿತ್ತು. ನಂತರ ಎದೆಗೆ ಗುದ್ದಿತ್ತು. ಕಳೆದ ವರ್ಷ ಪ್ರಸಿದ್ಧ ಗೂಳಿಕಾಳಗ ಪಟು ಫ್ರಾನ್ಸಿಸ್ ರಿವಾರೊಗೆ ಕಾಳಗದ ವೇಳೆ ಮಾರಕ ಗಾಯವಾಗಿತ್ತು. ಕಳೆದ ನೂರು ವರ್ಷಗಳಲ್ಲಿ ಗೂಳಿಕಾಳಗದಲ್ಲಿ ಸ್ಪೈನ್‌ನಲ್ಲಿ 134 ಮಂದಿ ಮೃತರಾಗಿದ್ದು ಪ್ರತಿವರ್ಷ ಸ್ಪೈನ್‌ನಲ್ಲಿ 2000ಕ್ಕೂ ಹೆಚ್ಚು ಗೂಳಿಕಾಳಗಗಳು ನಡೆಯುತ್ತವೆ. ಈಗ ಸ್ಪೈನ್‌ನ ಕೆಲವು ಪ್ರದೇಶಗಳಲ್ಲಿ ಗೂಳಿಕಾಳಗಕ್ಕೆ ನಿಷೇಧ ಹೇರಲಾಗಿದೆ ಎಂದು ವರದಿಗಳು ತಿಳಿಸಿವೆ.