×
Ad

ಝಾಕಿರ್ ನಾಯ್ಕ್ ಅವರ ಪೀಸ್ ಟಿವಿ ಚಾನೆಲ್ ಗೆ ಬಾಂಗ್ಲಾದಲ್ಲಿ ನಿಷೇಧ

Update: 2016-07-10 16:23 IST

ಢಾಕಾ, ಜು.10: ವಿಶ್ವವಿಖ್ಯಾತ ಇಸ್ಲಾಮಿಕ್ ಚಿಂತಕ ಹಾಗೂ ವಾಗ್ಮಿ ಡಾ.ಝಾಕೀರ್ ನಾಯ್ಕ್ ಮಾಲಕತ್ವದ ಪೀಸ್ ಟಿವಿ ಚಾನೆಲ್ ಪ್ರಸಾರಕ್ಕೆ ಬಾಂಗ್ಲಾ ಸರಕಾರ ರವಿವಾರ ನಿಷೇಧ ವಿಧಿಸಿದೆ.
ಇತ್ತೀಚೆಗೆ ಢಾಕಾ ಕೆಫೆ ಮೇಲಿನ ದಾಳಿಕೋರರಲ್ಲಿ ಇಬ್ಬರು ಮುಂಬೈಯ ಡಾ. ಝಾಕೀರ್‌ ನಾಯ್ಕ್ ಬೋಧನೆಯಿಂದ ಪ್ರಭಾವಿತರಾಗಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ ಅವರ ಪೀಸ್ ಟಿವಿಗೆ  ಬಾಂಗ್ಲಾ ಸರಕಾರ ನಿಷೇಧ ಹೇರಿದೆ.
 ಕಾನೂನು ಮತ್ತು ಸುವ್ಯವಸ್ಥೆ ಮತ್ತು ಕೈಗಾರಿಕಾ ಸಚಿವ ಆಮಿರ್‌  ಹುಸೈನ್‌  ಅಮು ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುದ ವಿಶೇಷ ಸಭೆಯಲ್ಲಿ ಈ ನಿರ್ಧಾರ  ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಹಿರಿಯ ಸಚಿವರು ಮತ್ತು ಉನ್ನತ ಭದ್ರತಾ ಅಧಿಕಾರಿಗಳು ಹಾಜರಿದ್ದರು,  ಡಾ.ಝಾಕೀರ್ ನಾಯ್ಕ್  ಅವರು ಯವ ರೀತಿ ಪ್ರಚೋದನಕಾರಿ ಉಪನ್ಯಾಸಗಳನ್ನು ನೀಡಿದ್ದಾರೆ ಎಂದು ಪರಿಶೀಲಿಸಲು ಶುಕ್ರವಾರ ಪ್ರಾರ್ಥನೆಯ ಸಮಯದಲ್ಲಿ ನೀಡಿದ ಉಪನ್ಯಾಸದ  ಮುದ್ರಿತ ದಾಖಲೆಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಅಮು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News