×
Ad

ಇಸ್ಲಾಮ್ ಕುರಿತ 'ಯುನೆಸ್ಕೊ ವರದಿ' ಸುಳ್ಳು ಸುದ್ದಿ

Update: 2016-07-10 16:33 IST

ಜುಲೈ 4ರಂದು juntakareporter.com (ಜುಂತಾಕಾ ರಿಪೋರ್ಟರ್) ಹೆಸರಿನ ವೆಬ್ ಸೈಟ್ ವೊಂದು 'ಇಸ್ಲಾಮ್ ಜಗತ್ತಿನ ಅತ್ಯಂತ 'ಶಾಂತಿಯುತ ಧರ್ಮ'ವೆಂದು ಯುನೆಸ್ಕೋ ಘೋಷಿಸಿದೆ ಎಂಬ ವರದಿಯೊಂದನ್ನು ಪ್ರಕಟಿಸಿತು. ಇದನ್ನು ಸತ್ಯವೆಂದು ನಂಬಿದ ಸಾವಿರಾರು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚರ್ಚಿಸುತ್ತಿದ್ದಾರೆ. ಆದರೆ ಇದು ಸುಳ್ಳು ಸುದ್ದಿ. juntakareporter.comನಲ್ಲಿ ಬರುವ 'ಸುದ್ದಿಗಳನ್ನು' ಗಮನಿಸಿದರೆ ಯಾರಿಗಾದರು ಇದು ಸುಲಭವಾಗಿ ಅರ್ಥವಾಗುತ್ತದೆ. ಆದರೆ ಪ್ರಧಾನಿ ಮೋದಿ ವಿಶ್ವದ ಶ್ರೇಷ್ಠ ಪ್ರಧಾನಿ ಎಂದು ಯುನೆಸ್ಕೊ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಹಿಂದೆ ಮುಂದೆ ನೋಡದೆ ನಂಬಿ ಇತರರೊಂದಿಗೂ ಅದನ್ನು ಹಂಚಿಕೊಂಡಂತೆ ಈ ವರದಿಯೂ ವ್ಯಾಪಕವಾಗಿ ಹರಡಿದೆ.

 
ರಿಫಾತ್ ಜಾವೇದ್ ಎಂಬ ಪತ್ರಕರ್ತ ಇತ್ತೀಚೆಗೆ  jantakareporter.com ಎಂಬ ಸುದ್ದಿ ವೆಬ್ ಸೈಟ್ ಯೊಂದನ್ನು ಪ್ರಾರಂಭಿಸಿದ್ದಾರೆ. ಬಿಜೆಪಿ, ಸಂಘ ಪರಿವಾರ, ಎನ್.ಡಿ.ಎ ಸರಕಾರ ಹಾಗೂ ಕಾಪರ್ೋರೇಟ್ ಕ್ಷೇತ್ರಗಳ ಕುರಿತು ಸಾಮಾನ್ಯಾವಾಗಿ ಮಾಧ್ಯಮಗಳಲ್ಲಿ ವರದಿಯೇ ಆಗದ ಸುದ್ದಿಗಳನ್ನು ನೀಡುವ ಮೂಲಕ ಈ ವೆಬ್ ಸೈಟ್ ಬಹಳ ಬೇಗ ಓದುಗರ ಗಮನ ಸೆಳೆದಿದೆ. ಈಗ ಆ ವೆಬ್ಸೈಟನ್ನು ಅಂದಾಜಿಸುವಂತೆ ಕೇವಲ  ಒಂದು ಅಕ್ಷರದ ವ್ಯತ್ಯಾಸದೊಂದಿಗೆ juntakareporter.com ವೆಬ್ ಸೈಟ್ ಒಂದು ಪ್ರಾರಂಭವಾಗಿದೆ. ಇದರಲ್ಲಿ ಸಾಮಾನ್ಯವಾಗಿ ಮೋದಿ, ಬಿಜೆಪಿ, ಸಂಘ ಪರಿವಾರಗಳನ್ನು ವಿರೋಧಿಸುವವರ ಕುರಿತು 'ಸುಳ್ಳು ಸುದ್ದಿಗಳನ್ನೇ' ಸುದ್ದಿಯ ರೂಪದಲ್ಲಿ ನೀಡಲಾಗುತ್ತದೆ. ಸಾಲದಕ್ಕೆ ನಮ್ಮ ಸಂಪಾದಕರ ಹೆಸರು ಮೊಫಾತ್ ಜಾವೆದ್ ಎಂದೂ ಆ ವೆಬ್ ಸೈಟ್ ಹೇಳಿಕೊಂಡಿದೆ.

juntakareporter.com ನಲ್ಲಿ ಪ್ರಕಟವಾಗುವ 'ಸುದ್ದಿಗಳನ್ನು' ಓದುವಾಗಲೇ ಇದು ನಿಜವಲ್ಲ ಎಂದು ಪತ್ರಕರ್ತರಿಗೆ ಹಾಗೂ ರಾಜಕೀಯ ಪ್ರಜ್ಞೆ ಇರುವ ಯಾರಿಗೂ ಗೊತ್ತಾಗುತ್ತದೆ. ಆದರೆ ಸಾಮಾನ್ಯ ಓದುಗರಿಗೆ ಇದು ಮೊದಲ ಓದಿಗೆ ಗೊತ್ತಾಗುವ ಸಾಧ್ಯತೆ ಕಡಿಮೆ.

"ಅರವಿಂದ್ ಕೇಜ್ರಿವಾಲ್ ಗೆ ಅಮೆರಿಕ ಉಪನ್ಯಾಸ ನೀಡಲು ಆಹ್ವಾನ ನೀಡಿದೆ, ಆದರೆ ಅದನ್ನು ದಿಲ್ಲಿ ಲೆ.ಗೌ. ನಝೀಬ್ ಅವರು ತಡೆದಿದ್ದಾರೆ.", "ಮುಂದಿನ ಗುಜರಾತ್ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷಕ್ಕೆ ಬಹುಮತ ಬರುತ್ತದೆ" ಇತ್ಯಾದಿ 'ಸುಳ್ಳು ಸುದ್ದಿ' ಗಳು ಈ ವೆಬ್ ಸೈಟ್ ಲ್ಲಿದೆ.

ಅದೇ ರೀತಿ ಇತ್ತೀಚೆಗೆ ಬಾಂಗ್ಲಾ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಇಸ್ಲಾಂ ಕುರಿತ ವ್ಯಂಗ್ಯದ ಧಾಟಿಯ 'ಶಾಂತಿ ಸುದ್ದಿ' ಇದರಲ್ಲಿ ಪ್ರಕಟವಾಗಿದೆ.

ಎಲ್ಲಕ್ಕಿಂತ ಮುಖ್ಯವೆಂದರೆ, ಯುನೆಸ್ಕೊಗೆ ಯಾವುದೇ ಧರ್ಮಕ್ಕೆ ಸರ್ಟಿಫಿಕೇಟ್ ನೀಡುವ ಅಧಿಕಾರವಾಗಲಿ, ಹಕ್ಕಾಗಲಿ ಇಲ್ಲ.

ಇಷ್ಟಕ್ಕೂ ಇಸ್ಲಾಮ್ ಧರ್ಮಕ್ಕೆ ಯಾರದೇ ಪ್ರಮಾಣ ಪತ್ರದ ಅಗತ್ಯವೂ ಇಲ್ಲ. ಇಂತಹ ದಾರಿ ತಪ್ಪಿಸುವ 'ಸುದ್ದಿ ಮೂಲಗಳ' ಕುರಿತು ನಾವು ಎಚ್ಚರದಿಂದ ಇರಬೇಕಾಗಿದೆ.
 
ಇದರ ವರದಿಗಳ ವಿಷಯ ಆಯ್ಕೆ, ಧಾಟಿ ಗಮನಿಸಿದರೆ ಬಲಪಂಥೀಯ ಒಲವಿನ ಗುಂಪು ಅಥವಾ ವ್ಯಕ್ತಿ ಈ ವೆಬ್ಸೈಟ್ನ ಹಿಂದಿರುವಂತೆ ಕಾಣುತ್ತದೆ. ಆದರೆ ವೆಬ್ ಸೈಟ್ ನಲ್ಲಿ ಈ ಕುರಿತ ಯಾವುದೇ ಮಾಹಿತಿ ನೀಡಲಾಗಿಲ್ಲ. 

Writer - ಹುಸೇನ್.ಎಂ

contributor

Editor - ಹುಸೇನ್.ಎಂ

contributor

Similar News