ರಿಯೋ ಒಲಿಂಪಿಕ್ಸ್ ಗೆ 206 ರಾಷ್ಟ್ರಗಳು
Update: 2016-07-12 10:38 IST
ರಿಯೋ ಡಿ ಜನೇರಿಯೋ , ಜು.12:ರಿಯೋ ಡಿ ಜನೇರಿಯೋದಲ್ಲಿ ಒಲಿಂಪಿಕ್ಸ್ ಮುಂಬರುವ ಆಗಸ್ಟ್ 5ರಿಂದ 21ರ ತನಕ ನಡೆಯಲಿದೆ. ಒಲಂಪಿಕ್ಸ್‌ಗೆ ಸಂಬಂಧಪಟ್ಟ ಅಂಕಿ ಅಂಶಗಳು ಇಂತಿವೆ.
- 17,000: ಒಲಿಂಪಿಕ್ಸ್‌ನಲ್ಲಿ 17,000 ಅಥ್ಲೀಟ್‌ಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.
- 78,000: ಮರಕಾನ ಸ್ಟೇಡಿಯಂನಲ್ಲಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಸ್ಟೇಡಿಯಂಲ್ಲಿ 78,000 ಆಸನಗಳ ವ್ಯವಸ್ಥೆ ಇದೆ.
- 206: ಒಲಿಂಪಿಕ್ಸ್ ನಲ್ಲಿ 206 ರಾಷ್ಟ್ರಗಳ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ.
- 4,50,000: ಒಲಿಂಪಿಕ್ಸ್ ನಲ್ಲಿ 11,000 ಅಥ್ಲೀಟ್ ಗಳಿಗೆ 4,50,000 ಕಾಂಡೋಮ್ ಗಳು ಲಭ್ಯ.
- 7.5: ಮಾರಾಟವಾಗಿರುವ ಟಿಕೆಟ್ ಗಳು 7.5 ಮಿಲಿಯನ್ .
- 10: ಒಲಿಂಪಿಕ್ಸ್ ಗಾಗಿ ನಿರ್ಮಿಸಲಾದ ಅಂಡರ್ ಗ್ರೌಂಡ್ ಮೆಟ್ರೋ ಸಿಸ್ಟಮ್ 10 ಮೈಲ್ ಉದ್ದ(16 ಕಿ.ಮೀ)
- 25,000: ಭಾಗವಹಿಸಲಿರುವ ಪತ್ರಕರ್ತರು 25,000
- 500,000: ಭಾಗವಹಿಸಲಿರುವ ಪ್ರವಾಸಿಗರು 5,00,000.
- 31: ಒಲಿಂಪಿಕ್ಸ್ ಗ್ರಾಮದಲ್ಲಿ ನಿರ್ಮಿಸಲಾದ ಟವರ್ ಬ್ಲಾಕ್ ಗಳು 31. ಒಲಿಂಪಿಕ್ಸ್ ಬಳಿಕ ಮಾರಾಟವಾಗಲಿರುವ ಅಪಾರ್ಟ್ ಮೆಂಟ್ ಗಳು 3,604.
- 60,000: ಒಲಿಂಪಿಕ್ಸ್ ಗ್ರಾಮದಲ್ಲಿ ಪ್ರತಿದಿನ 60,000 ಮಂದಿಗೆ ಊಟದ ಸೌಭಲ್ಯ.
- 80,000: ಆಸನಗಳ ವ್ಯವಸ್ಥೆ
- 400: ಬಳಕೆಯಾಗಲಿರುವ ಫುಟ್ಬಾಲ್ ಚೆಂಡುಗಳು 400