×
Ad

ಶ್ರೀಲಂಕಾ: ಮಾಜಿ ಅಧ್ಯಕ್ಷ ರಾಜಪಕ್ಸೆ ಪುತ್ರನ ಬಂಧನ!

Update: 2016-07-12 10:43 IST

ಕೊಲೊಂಬೊ, ಜುಲೈ 12: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆಯ ಪುತ್ರನನ್ನು ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆಯೆಂದು ವರದಿಯಾಗಿದೆ. ರಾಜಪಕ್ಸೆಯ ಹಿರಿಪುತ್ರ ನಮಾಲ್ ರಾಜಪಕ್ಸೆ(30) 65 ಕೋಟಿ ಡಾಲರ್ ಮೊತ್ತದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮವೆಸಗಿದ್ದಾರೆಂದು ಆರೋಪಿಸಿ ಸೋಮವಾರ ಬಂಧಿಸಲಾಗಿದೆ.

ಭಾರತದ ಪ್ರಮುಖ ಬಿಸಿನೆಸ್ ಗುಂಪಾದ ಕೃಷ್ ಗ್ರೂಪ್‌ನೊಂದಿಗೆ ನಡೆಸಿದ ವ್ಯವಹಾರಕ್ಕೆ ಸಂಬಂಧಿಸಿ ನಮಾಲ್‌ನನ್ನು ಬಂಧಿಸಲಾಗಿದೆ. 2013ರಲ್ಲಿ ಕೃಷ್‌ಗ್ರೂಪ್ ಕೊಲೊಂಬೊದ ಜಿಲ್ಲೆಯೊಂದರಲ್ಲಿ ಬೃಹತ್ ರಿಯಲ್ ಎಸ್ಟೇಟ್ ಯೋಜನೆಗಾಗಿ ಅಂದಿನ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಯೋಜನೆ ಜಾರಿಗೊಳ್ಳಲಿಕ್ಕಾಗಿ ಅಂದು ಸರಕಾರದಲ್ಲಿದ್ದವರಿಗೆ ಕೃಷ್‌ಗ್ರೂಪ್ ಲಂಚದ ವಾಗ್ದಾನ ಮಾಡಿತ್ತು ಎನ್ನಲಾಗಿದ್ದು ಆಗ ಸಂಸತ್ ಸದಸ್ಯನಾಗಿದ್ದ ನಮಾಲ್‌ಗೆ ಕೃಷ್‌ಗ್ರೂಪ್ ಹಣ ನೀಡಿದೆ ಎಂದು ಸಾಬೀತಾದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News