×
Ad

ಝಾಕಿರ್ ನಾಯ್ಕ್ ಕುರಿತ ತಮ್ಮ ಹಳೆಯ ಫತ್ವಾಗಳನ್ನು ಬೇಕಾದಂತೆ ಬಳಸಿಕೊಳ್ಳುತ್ತಿರುವ ಮಾಧ್ಯಮಗಳು

Update: 2016-07-12 16:03 IST

ತಮ್ಮ ಝಾಕಿರ್ ನಾಯ್ಕ್ ಮೇಲಿನ ಫತ್ವಾ ಮತ್ತು ಇಸ್ಲಾಮಿಕ್ ಬೋಧಕನ ಭಾಷಣಗಳು ಢಾಕಾದ ಭಯೋತ್ಪಾದಕ ದಾಳಿಗೆ ಪ್ರೇರಣೆಯಾಗಿದೆ ಎನ್ನುವ ವಿಷಯದ ನಡುವೆ ಸಂಬಂಧವಿದೆ ಎಂದು ಮಾಧ್ಯಮಗಳು ಹೇಳುತ್ತಿರುವುದನ್ನು ಇಸ್ಲಾಮಿಕ್ ಸೆಮಿನರಿ ದರ್ ಉಲ್ ಉಲೂಮ್ ದೇವ್ ಬಂದ್ ಭಾನುವಾರ ವಿರೋಧಿಸಿದೆ.

ಝಾಕಿರ್ ಮೇಲೆ ಹೇರಿರುವ ಕೆಲವು ಫತ್ವಾಗಳು ಮುಸ್ಲಿಂ ವರ್ಗಗಳಿಗೆ ಸಂಬಂಧೀಸಿದೆ. ಆದರೆ ಝಾಕಿರ್ ಡಾಕಾ ದಾಳಿಗೆ ಪ್ರೇರಣೆ ನೀಡುವಂತಹ ಭಾಷಣ ಮಾಡಿರುವ ಆರೋಪಗಳು ಬಂದ ಮೇಲೆ ಫತ್ವಾಗಳನ್ನು ಕೆಲವು ಸುದ್ದಿ ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ತಮ್ಮ ವರದಿಯಲ್ಲಿ ಎತ್ತಿ ತೋರಿಸಿದ್ದಾರೆ ಎಂದು ದರ್ ಉಲ್ ಉಲೂಮ್ ಅಶ್ರಫ್ ಉಸ್ಮಾನಿ ಹೇಳಿದ್ದಾರೆ. ಈ ಹಿಂದೆ ದೇವ್ ಬಂದ್ ಝಾಕಿರ್ ನಾಯ್ಕ್  ವಿರುದ್ಧ ಹೇರಿರುವ ಫತ್ವಾಗಳು ಭಯೋತ್ಪಾದನೆಗೆ ಸಂಬಂಧಿಸಿದೆ ಎನ್ನುವುದು ತಪ್ಪು ಭಾವನೆ ಎಂದು ಉಸ್ಮಾನಿ ಹೇಳಿದ್ದಾರೆ.

ಈದ್ ಕಾರಣ ಬ್ಯುಸಿಯಾಗಿದ್ದರಿಂದ ದೇವ್ ಬಂದ್ ಝಾಕಿರ್ ಬಗ್ಗೆ ಏನೂ ನಿಲುವು ಹೊಂದಿಲ್ಲ ಎಂದೂ ಅವರು ಹೇಳಿದ್ದಾರೆ. ಈ ಮೊದಲು ಬಾಂಗ್ಲಾದೇಶದ ಡೈಲಿ ಸ್ಟಾರ್ ಕೂಡ ಢಾಕಾ ಭಯೋತ್ಪಾದನೆಗೆ ಝಾಕಿರ್ ಕಾರಣ ಎನ್ನುವುದು ತಪ್ಪಾಗಿ ವರದಿಯಾಗಿದೆ ಎಂದು ಕ್ಷಮೆಯಾಚಿ ಸ್ಪಷ್ಟೀಕರಣ ನೀಡಿದೆ. ಡೈಲಿ ಸ್ಟಾರ್ ವರದಿಯೊಂದನ್ನೇ ಆಧಾರವಾಗಿರಿಸಿಕೊಂಡು ಭಾರತೀಯ ಮಾಧ್ಯಮಗಳು ಝಾಕಿರ್ ಮೇಲೆ ಕತ್ತಿ ಮಸೆದಿದ್ದವು.

ಈ ನಡುವೆ ಮುಸ್ಲಿಂ ವಿವಾಂಸರು ಝಾಕಿರ್ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಝಾಕಿರ್ ನಾಯ್ಕ್ ವಿರುದ್ಧ ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ಅಖಿಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿ ಸದಸ್ಯ ಮೌಲಾನ ರಶೀದ್ ಫರಂಗಿ ಮಹಾಲಿ ಹೇಳಿದ್ದಾರೆ. 1.4 ಕೋಟಿಗೂ ಅಧಿಕ ಬೆಂಬಲಿಗರಿರುವ ವ್ಯಕ್ತಿಯ ಕೆಲವು ಬೆಂಬಲಿಗರು ಭಯೋತ್ಪಾದಕರಾದರೆ ಆತನನ್ನು ಹೇಗೆ ಹೊಣೆಯಾಗಿಸುವುದು? ಇದು ದೊಡ್ಡ ಅನ್ಯಾಯ ಎಂದು ಮಹಾಲಿ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಝಾಕಿರ್ ನಾಯ್ಕ್ ಮೇಲೆ ವಿಚಾರಣೆಗೆ ಆದೇಶಿಸಿದ್ದನ್ನು ಅವರು ಸ್ವಾಗತಿಸಿದ್ದಾರೆ. ನಿಮಗೆ ಸಂಶವಿದ್ದರೆ ವಿಚಾರಣೆ ನಡೆಸಬೇಕು. ಆದರೆ ಮಾಧ್ಯಮಗಳು ವ್ಯಕ್ತಿತ್ವಹರಣ ಮಾಡುವ ರೀತಿ ಸಮರ್ಥನೀಯವಲ್ಲ ಎಂದು ಅವರು ಹೇಳಿದ್ದಾರೆ.

ಪ್ರತೀ ವ್ಯಕ್ತಿಗೂ ದೇಶದ ಕಾನೂನಿನ ಒಳಗೆ ಭಾಷಣ ಮಾಡುವ ಹಕ್ಕಿದೆ. ಆದರೆ ಮಾಧ್ಯಮ ವಿಚಾರಣೆ ಸರಿಯಲ್ಲ ಎಂದು ಶೀಬಿಲ್ ಅಕಾಡೆಮಿ ನಿರ್ದೇಶಕ ಪ್ರೊಫೆಸರ್ ಇಶ್ತಿಯಾಖ್ ಅಹ್ಮದ್ ಜಿಲ್ಲಿ ಹೇಳಿದ್ದಾರೆ. ಈ ನಡುವೆ ಅಖಿಲ ಭಾರತ ಶಿಯಾ ಖಾಸಗಿ ಕಾನೂನು ಮಂಡಳಿ ಮೌಲಾನ ಯಸೂಬ್ ಅಬ್ಬಾಸ್ ಅವರು ಝಾಕಿರ್ ನಾಯ್ಕ್ ಅವರನ್ನು ವಿರೋಧಿಸಿದ್ದಾರೆ. ತಪ್ಪು ಮಾನಸಿಕ ಸ್ಥಿತಿ ಇದ್ದವರು ಝಾಕಿರ್ ಭೋದನೆಗಳಿಂದ ಪ್ರಭಾವಿತರಾಗಿ ಭಯೋತ್ಪಾದನೆಗೆ ಇಳಿಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಝಾಕಿರ್  ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಭಾಷಣಗಳನ್ನು ನಿಷೇಧಿಸಬೇಕು ಮತ್ತು ಅವರ ರಾಷ್ಟ್ರೀಯತೆಯನ್ನು ಹಿಂತೆಗೆದುಕೊಳ್ಳಬೇಕು ಎಂದೂ ಅವರು ಅಭಿಪ್ರಾಯಪಟ್ಟರು.

ಕೃಪೆ: jantakareporter.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News