465ಕಿಲೊ ಭಾರ ಎತ್ತಿ ಐತಿಹಾಸಿಕ ಸಾಧನೆ ಮಾಡಿದ ಬ್ರಿಟನ್‌ನ ಯುವಕ!
ಲೀಡ್ಸ್,ಜುಲೈ 12: ಬ್ರಿಟನ್‌ನ ಲೀಡ್ಸ್ ಅರಿನಾ ಎಂಬಲ್ಲಿ ಇಪ್ಪತ್ತೊಂಬತ್ತು ವರ್ಷದ ಬಿಡಿ ಹಾಲ್ ಎಂಬ ಯುವಕ 465ಕೆಜಿ ಭಾರವನ್ನು ಎತ್ತುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆಂದು ವರದಿಯಾಗಿದೆ. ಬಿಡಿ ಹಾಲ್ ಇಷ್ಟು ಭಾರೀ ಪ್ರಮಾಣದ ಭಾರವನ್ನು ಎತ್ತುವಾಗ ವೀಕ್ಷಕರು ಉಸಿರು ಬಿಗಿಹಿಡಿದು ತುದಿಗಾಲಲ್ಲಿ ನಿಂತು ನೋಡುತ್ತಿದ್ದರೆಂದು ವರದಿ ತಿಳಿಸಿದೆ. ಬಿಡಿ ಹಾಲ್ ವಿಶ್ವವೇ ಬೆರಗಾಗುವಂತಹ ಈ ಸಾಧನೆಗಿಳಿದಾಗ ಸ್ವಂತ ಜೀವವನ್ನು ಲೆಕ್ಕಿಸಲಿಲ್ಲ. ತಲೆಯ ನರ ತುಂಡಾಗಿ ರಕ್ತ ಸುರಿದರೂ ಹಿಂಜರಿಯದೆ 465ಕೆಜಿ ತೂಕವನ್ನು ಎತ್ತಿ ದಾಖಲೆ ಮಾಡಿದ್ದಾರೆ.
ಇಷ್ಟು ಭಾರ ಎತ್ತುವುದಕ್ಕಿಂತ ಮುಂಚೆ ಹಾಲ್ ದೀರ್ಘ ಉಸಿರು ಎಳೆಯುತ್ತಿರುವುದರ ವೀಡಿಯೋ ದೃಶ್ಯಗಳು ಹೊರಗೆ ಬಂದಿದ್ದವು. ಒಂದು ಹಂತದಲ್ಲಿ ಭಾರವೆತ್ತುತ್ತಾ ಎಡವಿ ಬೀಳುತ್ತಾರೆಂದಾದಾಗ ಅಲ್ಲಿದ್ದ ಕೆಲವರು ಹಾಲ್‌ರ ಸಹಾಯಕ್ಕಾಗಿ ಓಡಿ ಬರುತ್ತಿದ್ದ ದೃಶ್ಯಗಳು ಈ ವೀಡಿಯೊದಲ್ಲಿವೆ. ಅತಿಹೆಚ್ಚು ಭಾರ ಎತ್ತಿ ವಿಶ್ವಚಾಂಪಿಯನ್ ಆದ ಶಕ್ತಿಶಾಲಿ ವ್ಯಕ್ತಿ ಎಂಬ ಸಾಧನೆ ಮಾಡುವಾಗ ಅವರ ತಲೆಯ ನರ ತುಂಡಾಗಿ ಮೂಗಿನಿಂದ ರಕ್ತಸುರಿಯುತ್ತಿತ್ತು ಇದು ಕೂಡಾ ವೀಡಿಯೋದಲ್ಲಿ ಕಾಣಿಸುತ್ತಿತ್ತು. ಅತಿಹೆಚ್ಚು ಭಾರ ಎತ್ತಿದ ಕಾರಣ ಸಾವಿನ ಅಂಚಿಗೆ ತಲುಪಿದ್ದೆ ಎಂದು ಎಡಿ ಹಾಲ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟೇ ಸವಾಲಿನ ವಿಷಯ ಇದಾದರೂ ಗುರಿಯತ್ತ ಸಾಗಲು ದೃಢನಿಶ್ಚಯವನ್ನು ಮಾಡಿದ್ದೆ ಎಂದು ಅವರು ಹೇಳಿದ್ದಾರೆ. ಜಗತ್ತಿನಲ್ಲಿ ಇಷ್ಟು ಹೆಚ್ಚು ಭಾರ ಎತ್ತಿದ ಮೊದಲ ವ್ಯಕ್ತಿ ತಾನಾಗಿದ್ದಕ್ಕೆ ಹಾಲ್ ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ಹಾಲ್‌ಗೆ ಪತ್ನಿ ಮತ್ತುಇಬ್ಬರು ಮಕ್ಕಳಿದ್ದಾರೆ ಎಂದು ವರದಿ ತಿಳಿಸಿದೆ.