×
Ad

ಇಟಲಿಯಲ್ಲಿ ರೈಲುಗಳ ಮುಖಾಮುಖಿ ಢಿಕ್ಕಿ

Update: 2016-07-13 11:52 IST

ರೋಮ್(ಇಟಲಿ), ಜು.13: ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಎರಡು ಪ್ಯಾಸೆಂಜರ್ ರೈಲುಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸುಮಾರು 25 ಮಂದಿ ಸಾವನ್ನಪ್ಪಿ, 12ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ದಾರುಣ ಘಟನೆ ದಕ್ಷಿಣ ಇಟಲಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಪಗ್ಲಿಯಾ ವಲಯದ ಕೊರಾಟೊ ಹಾಗೂ ಆ್ಯಂಡ್ರಿಯ ಪಟ್ಟಣವನ್ನು ಸಂಪರ್ಕ ಕಲ್ಪಿಸುವ ಹಳಿಯಲ್ಲಿ ಎರಡೂ ರೈಲುಗಳು ಚಲಿಸಿದ ಕಾರಣ ಭೀಕರ ಘಟನೆ ನಡೆದಿದ್ದು, ಘಟನೆಯಲ್ಲಿ ಎರಡೂ ರೈಲುಗಳ ಮುಂಭಾಗ ನಜ್ಜು-ಗುಜ್ಜಾಗಿವೆ.

ಮಂಗಳವಾರ ಸಂಜೆ ಮೃತರ ಸಂಖ್ಯೆ 25ಕ್ಕೇರಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. 50 ಮಂದಿ ಗಂಭೀರ ಗಾಯಗೊಂಡಿರುವ ಕಾರಣ ಮೃತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇಟಲಿಯಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಭೀಕರ ಘಟನೆಗೆ ಕಾರಣ ಏನೆಂದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಇಟಲಿ ಸರಕಾರ ಭರವಸೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News