×
Ad

ರೆಂಬೆ-ಕೊಂಬೆಗಳ ಅಪಾಯ!

Update: 2016-07-13 22:43 IST

ಮಾನ್ಯರೆ,
ಕಂಕನಾಡಿ ಫಾದರ್‌ಮುಲ್ಲರ್ ಆಸ್ಪತ್ರೆಯ ಸಮೀಪದ ಹೆದ್ದಾರಿಯಲ್ಲಿ ರಸ್ತೆಯ ಉದ್ದಗಲಕ್ಕೂ ದೊಡ್ಡ ದೊಡ್ಡ ಮರಗಳ ರೆಂಬೆ-ಕೊಂಬೆಗಳು ಹರಡಿಕೊಂಡಿದ್ದು ಮಳೆಗಾಲದಲ್ಲಿ ಅಪಾಯವನ್ನು ಆಹ್ವಾನಿಸುತ್ತಿವೆ.
ಸದಾ ಕಾಲ ಜನ, ವಾಹನ ನಿಬಿಡವಾಗಿರುವ ಈ ರಸ್ತೆಯಲ್ಲಿ ಮಳೆ-ಗಾಳಿಯ ವಿಕೋಪಕ್ಕೆ ತುತ್ತಾಗಿ ದೊಡ್ಡ ಗಾತ್ರದ ಕೊಂಬೆಗಳೇನಾದರೂ ಕಳಚಿ ಬಿದ್ದರೆ ಪರಿಣಾಮ ಊಹಿಸಲಸಾಧ್ಯ.
ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಿ ಅಪಾಯಕಾರಿಯಾಗಿರುವ ರೆಂಬೆ-ಕೊಂಬೆಗಳನ್ನು ಕತ್ತರಿಸಿ ಮುಂದೊದಗುವ ಅವಘಡಗಳನ್ನು ತಪ್ಪಿಸಬೇಕಾಗಿದೆ.
 

Writer - -ಕರುಣಾಕರ, ಮಂಗಳೂರು

contributor

Editor - -ಕರುಣಾಕರ, ಮಂಗಳೂರು

contributor

Similar News