ಧೋನಿಗೆ ಆಸ್ಟ್ರೇಲಿಯದ ಕಂಪೆನಿಯಿಂದ 20 ಕೋಟಿ ರೂ. ಪಂಗನಾಮ
Update: 2016-07-14 23:56 IST
ಹೊಸದಿಲ್ಲಿ, ಜು.14: ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಆಸ್ಟ್ರೇಲಿಯದ ಕ್ರೀಡಾ ಸಾಮಗ್ರಿ ಕಂಪೆನಿ ಸ್ಪಾರ್ಟನ್ ಸ್ಪೋರ್ಟ್ಸ್ 20 ಕೋಟಿ ರೂ. ಪಂಗನಾಮ ಹಾಕಿರುವುದಾಗಿ ಅವರ ಜಾಹೀರಾತು ವ್ಯವಹಾರಗಳ ಉಸ್ತುವಾರಿ ಹೊಂದಿರುವ ರಿತಿ ಸ್ಪೋರ್ಟ್ಸ್ ಮಾಲಕ ಅರುಣ ಪಾಂಡೆ ತಿಳಿಸಿದ್ದಾರೆ.
ಧೋನಿ ಜೊತೆಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿರುವ ಸ್ಪಾರ್ಟನ್ ಸ್ಪೋರ್ಟ್ಸ್ ಷರತ್ತುಗಳನ್ನು ಉಲ್ಲಂಘಿಸಿ ಅವರಿಗೆ ಸಲ್ಲತಕ್ಕ ಹಣವನ್ನು ಪಾವತಿಸಿಲ್ಲ. ಎಲ್ಲವೂ ಅಷ್ಟೇನೂ ಸುಗಮವಾಗಿಲ್ಲ. ಈ ವಿವಾದ ಶೀಘ್ರ ಬಗೆಹರಿಯಲಿದೆ ಎಂದು ಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.