ಸೈನಿಕ ಕ್ಷಿಪ್ರದಂಗೆಯನ್ನು ಖಂಡಿಸಿದ ಟರ್ಕಿಯ ಧಾರ್ಮಿಕ ನಾಯಕರು
Update: 2016-07-17 11:48 IST
ಅಂಕಾರಾ,ಜುಲೈ 17: ಸೈನಿಕ ಕ್ಷಿಪ್ರದಂಗೆಯನ್ನುಖಂಡಿಸಿ ಟರ್ಕಿಯ ಧಾರ್ಮಿಕ ನಾಯಕರು ರಂಗಪ್ರವೇಶಿಸಿದ್ದಾರೆಂದು ವರದಿಯಾಗಿದೆ.ಮುಸ್ಲಿಂ, ಯಹೂದಿ, ಕ್ರೈಸ್ತ ಧರ್ಮಗುರುಗುಳು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಸೇನೆಯ ಒಂದು ಬಂಡುಕೋರ ವಿಭಾಗ ನಡೆಸಿದ ಸರಕಾರವನ್ನು ಬುಡಮೇಲುಗೊಳಿಸುವ ಕೃತ್ಯವನ್ನು ಖಂಡಿಸಿದ್ದು ದೇಶದಲ್ಲಿ ಇತ್ತೀಚೆಗೆ ನಡೆದಿರುವ ಭಯೋತ್ಪಾದಕ ದಾಳಿಯ ನಂತರದ ಬಹುದೊಡ್ಡ ದುಃಖದ ಸಂಗತಿ ಇದೆಂದು ಸೇನಾ ದಂಗೆಯನ್ನು ಉಲ್ಲೇಖಿಸಿ ವಿಷಾದ ಸೂಚಿಸಿದ್ದಾರೆಂದು ವರದಿ ತಿಳಿಸಿದೆ.
ಟರ್ಕಿಯ ಧಾರ್ಮಿಕ ವಿಷಯಗಳ ಖಾತೆ ಅಧ್ಯಕ್ಷ ಮುಹಮ್ಮದ್ ಗೋರ್ಮಸ್, ಇಸ್ತಾಂಬುಲ್ ಗ್ರೀಕ್ ಅರ್ಥೋಡಕ್ಸ್ ಚರ್ಚ್ ಮುಖ್ಯಸ್ಥ, ಟರ್ಕಿಯ ಯಹೂದಿ ವಿಭಾಗದ ಮುಖ್ಯ ಪುರೋಹಿತರಾದ ಇಶಾಕ್ ಹಲೆವಾ ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಸೇನಾ ದಂಗೆಯನ್ನು ಖಂಡಿಸಿದರೆಂದು ವರದಿ ತಿಳಿಸಿದೆ.