×
Ad

ಅರುಣಾಚಲ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣ ವಚನ

Update: 2016-07-17 14:04 IST

ಇಟಾನಗರ, ಜು.17: ಅರುಣಾಚಲ ಪ್ರದೇಶದ 9ನೆ ಮುಖ್ಯಮಂತ್ರಿಯಾಗಿ ರವಿವಾರ ಪೆಮಾ ಖಂಡು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಲ್ಲಿನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ ರಾಯ್ ಪೆಮಾ ಹಾಗೂ ಉಪ ಮುಖ್ಯಮಂತ್ರಿ ಚೌನ ಮೇನ್‌ಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಡೋರ್ಜಿ ಖಂಡು ಪುತ್ರನಾಗಿರುವ 37ರ ಹರೆಯದ ಪೆಮಾ ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ಶನಿವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ನಬಂ ಟಕಿ ಬದಲಿಗೆ ಪೆಮಾ ಖಂಡು ಅವರನ್ನು ಹೊಸ ನಾಯಕನನ್ನಾಗಿ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿತ್ತು.

ಪೆಮಾ ಪಕ್ಷದ 45 ಶಾಸಕರು ಹಾಗೂ ಇಬ್ಬರು ಪಕ್ಷೇತರರ ಬೆಂಬಲದಿಂದ ಅಧಿಕಾರ ಪಡೆದಿದ್ದಾರೆ. ಬದಲಾದ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್‌ನಿಂದ ಕೆಳಗಿಸಲ್ಪಟ್ಟಿದ್ದ ಬಂಡುಕೋರ ಮುಖ್ಯಮಂತ್ರಿ ಖಾಲಿಕೊ ಪುಲ್ 30 ಮಂದಿ ಬಂಡುಕೋರ ಶಾಸಕರೊಂದಿಗೆ ಕಾಂಗ್ರೆಸ್ ತೆಕ್ಕೆಗೆ ಮರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News