×
Ad

ನಿಮ್ಮ ಅಚ್ಚುಮೆಚ್ಚಿನ ಬಿರಿಯಾನಿ ನಿಮಗೆ ಬಂದು ತಲುಪಿದ್ದು ಹೇಗೆ ಗೊತ್ತೆ?

Update: 2016-07-17 19:46 IST

ಬಿರಿಯಾನಿ ಭಾರತದಲ್ಲಿ ಎಲ್ಲರ ಮೆಚ್ಚುಗೆಯ ಅಡುಗೆ. 400 ವರ್ಷ ಹಳೇ ನಗರ ಹೈದರಾಬಾದನ್ನು ಬಿರಿಯಾನಿಗಾಗಿಯೇ ಹೆಚ್ಚು ಬಾರಿ ನೆನಪಿಸಿಕೊಳ್ಳಲಾಗುತ್ತದೆ. ಬಿರಿಯಾನಿ ಸ್ಥಳೀಯ ಗುರುತನ್ನು ಹೊಂದಿದ್ದರೂ ಅದು ಭಾರತಕ್ಕೆ ಬಂದ ಕತೆ ಬೇರೆಯೇ ಇತಿಹಾಸವನ್ನು ಹೇಳುತ್ತದೆ. ಬಿರಿಯಾನಿ ಭಾರತಕ್ಕೆ ಬಂದದ್ದು ಹೇಗೆ ಮತ್ತು ಯಾವಾಗ?

ಭಾರತೀಯ ಪುಲಾವ್ ಮತ್ತು ಬಿರಿಯಾನಿ ವಿಭಿನ್ನ ಮಸಾಲೆಗಳ ವಿಭಿನ್ನ ಅಡುಗೆ. ಒಂದು ಊಹೆಯ ಪ್ರಕಾರ ಬಿರಿಯಾನಿ ಇರಾನಿನಲ್ಲಿ ಹುಟ್ಟಿ ಭಾರತಕ್ಕೆ ಬಂದಿದೆ. ಪರ್ಶಿಯನ್ ಬಿರಿಂಜ್ ಬಿರಿಯಾನ್ ಅಥವಾ ಫ್ರೈಡ್ ರೈಸ್‌ಗೆ ಸಮೀಪ ಬರುತ್ತದೆ ಭಾರತೀಯ ಬಿರಿಯಾನಿ. ಇರಾನಿನಲ್ಲಿ ಮಡಕೆಯಲ್ಲಿ ಮ್ಯಾರಿನೇಟೆಡ್ ಮಾಡಿದ ಮಸಾಲೆಗಳು ಬೆರೆತ ನಿಧಾನವಾಗಿ ಬೇಯಿಸುವ ಮಾಂಸಕ್ಕೆ ಅಕ್ಕಿಯನ್ನು ಫ್ರೈ ಮಾಡಿ ಬೆರೆಸಲಾಗುತ್ತದೆ. ಆದರೆ ಇರಾನಿ ರಸ್ತೆಯಲ್ಲಿ ಮಾರುವ ಬಿರಿಯಾನಿ ಈಗ ಅನ್ನವನ್ನು ಬೆರೆಸಿರುವುದಿಲ್ಲ. ಬದಲಾಗಿ ರುಮಾಲಿ ರೋಟೆ ಜೊತೆಗೆ ಬೇಯಿಸಿದ ಮಾಂಸ ಸೇವಿಸಲಾಗುತ್ತದೆ. ಈ ಅಡುಗೆ ಭಾರತಕ್ಕೆ ಬಂದ ಮೇಲೆ ಹೊಸ ರೂಪ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ಮೊಘಲರ ಕಾಲದಲ್ಲಿ ಬಿರಿಯಾನಿ ಭಾರತಕ್ಕೆ ಬಂದ ಬಗ್ಗೆ ಸಾಕ್ಷ್ಯಗಳಿಲ್ಲ. ದಕ್ಷಿಣ ಭಾರತದ ಡೆಕ್ಕನ್ ಪ್ರಾಂತಕ್ಕೆ ಯಾತ್ರಿಗಳು ಮತ್ತು ಸೈನಿಕರು ಪ್ರಯಾಣಿಸಿದಾಗ ಈ ಆಹಾರವೂ ಜೊತೆಯಲ್ಲಿ ಬಂದಿರಬಹುದು ಎನ್ನಲಾಗಿದೆ.

ಈಗಿನ ಕೇರಳದಲ್ಲಿ ಮಲಬಾರ್/ಮಾಪ್ಲಾ ಬಿರಿಯಾನಿಯಲ್ಲಿ ಕೋಳಿ ಮಾಂಸದ ಬದಲಾಗಿ ಮೀನು ಅಥವಾ ಸಿಗಡಿ ಬಳಕೆಯಾಗುತ್ತದೆ. ಇಲ್ಲಿ ಮಸಾಲೆಯೂ ಗಾಢವಾಗಿರುತ್ತದೆ. ಆದರೆ ರುಚಿ ಮತ್ತು ಪರಿಮಳ ಹೈದರಾಬಾದಿ ಅಡುಗೆಗೆ ಸಮೀಪವಾಗಿದೆ. ಪಶ್ಚಿಮ ಬಂಗಾಳದಲ್ಲಿ ಢಾಕೈ ಇನ್ನೂ ರುಚಿಕರವಾಗಿರುತ್ತದೆ. ಹೀಗಾಗಿ ಬಿರಿಯಾನಿ ಸಾಗರ ಮಾರ್ಗವಾಗಿ ಭಾರತಕ್ಕೆ ಬಂದಿದೆ ಎಂದೂ ಹೇಳಬಹುದು.

ಪಶ್ಚಿಮ ಕರಾವಳಿಯಲ್ಲಿ ಬೋಹ್ರಿ ಬಿರಿಯಾನಿ ಇದೆ. ಭೋಪಾಲದಲ್ಲಿ ಅಡುಗೆ ಮಾಡುವ ಬಿರಿಯಾನಿ ಡುರಾನಿ ಅಫ್ಘಾನರ ಶೈಲಿಯದ್ದು. ಹಾಗೆಯೇ ಮೊರದಾಬಾದಿ ಬಿರಿಯಾನಿಯೂ ಇದೆ. ದೆಹಲಿಯಲ್ಲಿ ಇದು ಹೆಚ್ಚು ಜನಪ್ರಿಯ. ರಾಜಸ್ತಾನಿ ಬಿರಿಯಾನಿ ಇನ್ನೂ ಹೊಸ ರೂಪ ಪಡೆದುಕೊಂಡ ಅಡುಗೆ. ಅಜ್ಮೀರ್ ದರ್ಗಾದಲ್ಲಿ ಗರೀಬ್ ನವಾಝ್ ಕಿ ದರ್ಗಾ ಭಕ್ತರು ಇದನ್ನು ಜನಪ್ರಿಯಗೊಳಿಸಿದರು. ದುರದೃಷ್ಟವಶಾತ್ ನಿಜವಾದ ಮೆಕ್‌ಕಾಯ್ ಬಗ್ಗೆ ಜನರಿಗೆ ಗೊತ್ತಿಲ್ಲ. ಹಲವು ರೀತಿಯ ಬಿರಿಯಾನಿಗಳಿಗೆ ಕಾರಣವಾದ ಫ್ರೈಯಿಂಗ್ ಪಾನ್ ಬಿರಿಯಾನಿ ಇದು. ಇಲ್ಲಿ ಅನ್ನವನ್ನು ಹೆಚ್ಚು ಧಾನ್ಯವಾಗಿಟ್ಟುಕೊಂಡು ಕೇಸರಿ ಬೆರೆಸಲಾಗುತ್ತದೆ. ಆದರೆ ನಿಜವಾದ ನೀಲಿ ಬಿರಿಯಾನಿಗೆ ಇದು ಇನ್ನೂ ದೂರದಲ್ಲಿದೆ. ದುಬಾರಿ ಹೊಟೇಲುಗಳು ಮತ್ತು ಉತ್ತಮ ರೆಸ್ಟೋರೆಂಟುಗಳೂ ಆರಂಭದ ಹಂತದ ಬಿರಿಯಾನಿ ಮಾಡಲು ಹೋಗುವುದಿಲ್ಲ ಅವರೇನಿದ್ದರೂ ನಂತರ ಬೆಳೆದು ಬಂದ ದಮ್ ಕಿ ಬಿರಿಯಾನಿಯನ್ನೇ ತಯಾರಿಸುತ್ತಾರೆ. ಅವರಿಗೇ ಅದೇ ಅಂತಿಮ ಅಡುಗೆ ಕಲೆ.

ಕೃಪೆ: www.bbc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News