×
Ad

ಪಾಕ್ ರೂಪದರ್ಶಿ ಹತ್ಯೆ: ಸಹೋದರನ ಬಂಧನ

Update: 2016-07-17 22:10 IST

ಇಸ್ಲಾಮಾಬಾದ್, ಜು. 17: ಪಾಕಿಸ್ತಾನದ ರೂಪದರ್ಶಿ ಕಾಂದೀಲ್ ಬಲೋಚ್‌ರನ್ನು ಹತ್ಯೆಗೈದ ಆಕೆಯ ಸಹೋದರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದರು. ತನ್ನ ಸಹೋದರಿಯನ್ನು ‘‘ಗೌರವಕ್ಕಾಗಿ’’ ಕೊಂದಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದರು.

‘‘ಶನಿವಾರ ರಾತ್ರಿ ತನ್ನ ಸಹೋದರಿ ಕಾಂದೀಲ್ ಬಲೋಚ್‌ರನ್ನು ಕತ್ತು ಹಿಸುಕಿ ಕೊಂದ ಆರೋಪದಲ್ಲಿ ಮುಹಮ್ಮದ್ ವಾಸಿಮ್‌ನನ್ನು ಪೊಲೀಸರು ಬಂಧಿಸಿದ್ದಾರೆ’’ ಎಂದು ಮುಲ್ತಾನ್ ನಗರ ಪೊಲೀಸ್ ಮುಖ್ಯಸ್ಥ ಅಝರ್ ಅಕ್ರಮ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
‘‘ತನ್ನ ಸಹೋದರಿ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ‘‘ಆಕ್ಷೇಪಾರ್ಹ’’ ವೀಡಿಯೊಗಳನ್ನು ಹಾಕಿದ ಬಳಿಕ, ಗೌರವಕ್ಕಾಗಿ ತಾನು ಆಕೆಯನ್ನು ಕೊಂದೆ ಎಂಬುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ’’ ಎಂದರು.

ತನ್ನ ಸಹೋದರಿಗೆ ಮತ್ತು ಬರಿಸುವ ಪದಾರ್ಥ ನೀಡಿದ ಬಳಿಕ ಕತ್ತು ಹಿಸುಕಿ ಕೊಂದೆ ಎಂಬುದಾಗಿ ಆತ ಹೇಳಿದ್ದಾನೆ.
ಆಕೆಯ ಫೇಸ್‌ಬುಕ್ ಪೋಸ್ಟ್‌ಗಳು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News