ನವೆಂಬರ್ 18 ಕ್ಕೆ ನನ್ನ ಮದುವೆ : ಸಲ್ಮಾನ್ ಖಾನ್

Update: 2016-07-18 10:31 GMT

ಮುಂಬೈ, ಜು. 18 : " ನಾನು ನವೆಂಬರ್ 18 ರಂದು ಮದುವೆಯಾಗುತ್ತೇನೆ " ಎಂದು ಬಾಲಿವುಡ್ ನ ಭಾಯ್ ಸಲ್ಮಾನ್ ಖಾನ್ ಘೋಷಿಸಿದ್ದಾರೆ. ಆದರೆ ಇಲ್ಲಿಗೇ ಅವರ ಮದುವೆ ದಿನ ನಿಶ್ಚಯವಾಯಿತು ಎಂದು ಕೊಳ್ಳುವಂತಿಲ್ಲ. ಅವರು ಯಾವ ವರ್ಷದ ನವೆಂಬರ್ 18 ಎಂದು ಸಲ್ಮಾನ್ ಹೇಳಿಲ್ಲ !

ತನ್ನ ಪುಸ್ತಕ ಏಸ್ ಅಗೈನ್ಸ್ಟ್ ಆಡ್ಸ್ ಬಿಡುಗಡೆಗೆ ಬಂದಿದ್ದ ಸಲ್ಮಾನ್ ರನ್ನು ಖುದ್ದು ಸಾನಿಯಾ " ಎಲ್ಲರೂ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ " ಎಂದು  ಪ್ರಶ್ನಿಸಿದರು. ಇದರಿಂದ ಮುಜುಗರಗೊಂಡ ಸಲ್ಮಾನ್ ಉತ್ತರ ನೀಡಲು ತಡವರಿಸಿದರು. ಆಗ ನಿರೂಪಕ ನವೆಂಬರ್ 18 ಎಂದು ಹೇಳಿಬಿಟ್ಟರು. ತಕ್ಷಣ ಸಲ್ಮಾನ್ ಕೂಡ ಹೌದು, ನವೆಂಬರ್ 18. ಆದರೆ ಯಾವ ವರ್ಷ ಎಂದು ಗೊತ್ತಿಲ್ಲ ಎಂದು ಬಿಟ್ಟರು. 

ವಿಶೇಷವೆಂದರೆ ನವೆಂಬರ್ 18 ಸಲ್ಮಾನ್ ರ ತಂದೆ ಸಲೀಂ ಖಾನ್ ಹಾಗೂ ಸಲ್ಮಾ ಮದುವೆಯಾದ ದಿನ. ಅದೇ ದಿನ ಅವರ ತಂಗಿ ಅರ್ಪಿತಾ ಖಾನ್ ಅವರೂ ವಿವಾಹವಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News