×
Ad

ಪ್ರೊ ಕಬಡ್ಡಿ ಲೀಗ್: ಟೈಟನ್ಸ್ ವಿರುದ್ಧ ಕೋಲ್ಕತಾ ರೋಚಕ ಟೈ

Update: 2016-07-18 23:57 IST

ಕೋಲ್ಕತಾ, ಜು.18: ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್‌ ತಂಡ ತೆಲುಗು ಟೈಟನ್ಸ್ ವಿರುದ್ಧ 34-34 ಅಂತರದಿಂದ ರೋಚಕ ಜಯ ಸಾಧಿಸಿದೆ.

ಇಲ್ಲಿನ ನೇತಾಜಿ ಒಳಾಂಗಣ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಲೀಗ್‌ನ 40ನೆ ಪಂದ್ಯದಲ್ಲಿ ಅಂತಿಮ 10 ಸೆಕೆಂಡ್‌ನಲ್ಲಿ ಕೇವಲ ಒಂದು ಅಂಕವನ್ನು ಬಿಟ್ಟುಕೊಟ್ಟ ವಾರಿಯರ್ಸ್‌ ತಂಡ ಪಂದ್ಯವನ್ನು ಟೈಗೊಳಿಸಲು ಯಶಸ್ವಿಯಾಯಿತು.

 ಆದರೆ, ಈ ಫಲಿತಾಂಶದಿಂದಾಗಿ ಬಂಗಾಳ ತಂಡ ಸೆಮಿ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಬಂಗಾಳ 11 ಪಂದ್ಯಗಳಲ್ಲಿ 7 ಸೋಲು ಕಂಡಿದೆ. 10 ಪಂದ್ಯಗಳಲ್ಲಿ 32 ಅಂಕ ಗಳಿಸಿರುವ ಟೈಟನ್ಸ್ ತಂಡ ಅಂಕಪಟ್ಟಿಯಲ್ಲಿ 3ನೆ ಸ್ಥಾನ ಕಾಯ್ದುಕೊಂಡಿದೆ.

ಸ್ಟಾರ್ ರೈಡರ್ ಜಾಂಗ್ ಕುನ್ ಲೀ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಮೊದಲಾರ್ಧದಲ್ಲಿ 14-19 ರಿಂದ ಹಿನ್ನಡೆಯಲ್ಲಿದ್ದ ಕೋಲ್ಕತಾ ಬಳಿಕ ಚೇತರಿಸಿಕೊಂಡಿತು.

ಕೊರಿಯಾದ ಲೀ ಒಟ್ಟು 13 ಅಂಕ ಗಳಿಸಿದ ಕಾರಣ ಬೆಸ್ಟ್ ರೈಡರ್ ಪ್ರಶಸ್ತಿ ಪಡೆದರು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬಂಗಾಳ ತಂಡ ಈ ವರ್ಷದ ಲೀಗ್‌ನಲ್ಲಿ ಎರಡನೆ ಬಾರಿ ಟೈ ಸಾಧಿಸಿತು. ಬೆಂಗಳೂರಿನಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ವಿರುದ್ಧ ಬಂಗಾಳ ಟೈ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News