ಝಿಕಾ ವೈರಸ್ ವಿರುದ್ಧ ಹೋರಾಡಲು ಮೆಕ್ಸಿಕೊ ಒಲಿಂಪಿಯನ್ಸ್‌ಗೆ ಕಿಟ್ ವಿತರಣೆ

Update: 2016-07-19 07:19 GMT

ಮೆಕ್ಸಿಕೊ ಸಿಟಿ, ಜು.19: ರಿಯೋ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್‌ನಲ್ಲಿ ಝಿಕಾ ವೈರಸ್ ಬಾಧೆಯಿಂದ ಪಾರಾಗಲು ಮೆಕ್ಸಿಕೊ ಅಥ್ಲೀಟ್‌ಗಳಿಗೆ ಸೋಮವಾರ ಆ್ಯಂಟಿ ಝಿಕಾ ಕಿಟ್‌ಗಳನ್ನು ವಿತರಿಸಲಾಗಿದೆ. ಕಿಟ್‌ನಲ್ಲಿ ಸೊಳ್ಳೆ ನಿವಾರಕ, ಆ್ಯಂಟಿ ಬ್ಯಾಕ್ಟಿರಿಯಾ ಹ್ಯಾಂಡ್ ಜೆಲ್ ಹಾಗೂ ಕಾಂಡೋಮ್‌ಗಳಿವೆ.
124 ಅಥ್ಲೀಟ್‌ಗಳು, ಕೋಚ್‌ಗಳು ಹಾಗೂ ವೈದ್ಯರುಗಳಿರುವ ಮೆಕ್ಸಿಕೊ ಒಲಿಂಪಿಕ್ ನಿಯೋಗದೊಂದಿಗೆ ಚಿಕ್ಕದಾದ ಕಪ್ಪು ಬ್ಯಾಗ್ ಅಲ್ಲದೆ, ಇಬ್ಬರು ಸೋಂಕು ಶಾಸ್ತ್ರಜ್ಞರನ್ನು ಕಳುಹಿಸಿಕೊಡಲಾಗುವುದು ಎಂದು ಆರೋಗ್ಯ ಸಚಿವರು ಸೋಮವಾರ ತಿಳಿಸಿದ್ದಾರೆ.

ಆಗಸ್ಟ್ 5 ರಿಂದ 21ರ ತನಕ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ದಿನಕ್ಕೆ ಎರಡು ಬಾರಿ ಸೋಂಕು ನಿವಾರಕವನ್ನು ಸ್ವೀಕರಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಉಪ ಆರೋಗ್ಯ ಸಚಿವ ಪಾಬ್ಲೊ ಕ್ಯೂರಿ ಹೇಳಿದ್ದಾರೆ.

ಮೆಕ್ಸಿಕೋದಲ್ಲಿ 900ಕ್ಕೂ ಅಧಿಕ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ. ಬ್ರೆಝಿಲ್‌ನಲ್ಲಿ 1.5 ಜನರಿಗೆ ವೈರಸ್‌ನ ಸೋಂಕು ತಗಲಿದೆ.
ಝಿಕಾ ಒಂದು ಸೊಳ್ಳೆಯಿಂದ ಹರಡುವ ಕಾಯಿಲೆ. ನಿಧಾನವಾಗಿ ಕಾಣಿಸಿಕೊಳ್ಳುವ ಈ ರೋಗ ಜ್ವರದ ಲಕ್ಷಣ ಹೊಂದಿರುತ್ತದೆ. ಈ ವೈರಸ್ ಗರ್ಭೀಣಿ ಮಹಿಳೆಯರಲ್ಲಿ ಬೇಗನೆ ಹರಡುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News