×
Ad

ಮನಮೋಹನ್ ಸಿಂಗ್ ಜೊತೆ ಯಾವ ಪತ್ರಕರ್ತರು ಎಷ್ಟು ಬಾರಿ ವಿದೇಶ ಪ್ರವಾಸಕ್ಕೆ ಹೋಗಿದ್ದರು?

Update: 2016-07-19 15:25 IST

ಪ್ರಧಾನ ಮಂತ್ರಿಗಳ ವಿದೇಶ ಪ್ರವಾಸದ ಸಂದರ್ಭದಲ್ಲಿ ಮಾಧ್ಯಮ ಮಿತ್ರರನ್ನು ಜೊತೆಗೆ ಕರೆದುಕೊಂಡು ಹೋಗುವ ಪದ್ಧತಿಯನ್ನು ನರೇಂದ್ರ ಮೋದಿ ಪ್ರಧಾನಿಯಾಗುತ್ತಲೇ ಬಿಟ್ಟರು. ಪ್ರಧಾನಿ ಜತೆ ಪತ್ರಕರ್ತರನ್ನು ಕರೆದೊಯ್ಯಲು ಆರಂಭಿಸಿದ್ದು ರಾಜೀವ್ ಗಾಂಧಿ. ಈ ಪದ್ಧತಿಯನ್ನು ಅಟಲ್ ಬಿಹಾರಿ ವಾಜಪೇಯಿ ಕೂಡ ಮುಂದುವರಿಸಿದ್ದರು. ಆದರೆ ಪತ್ರಕರ್ತರು ಮನ್‌ಮೋಹನ್ ಸಿಂಗ್‌ರ ವಿದೇಶಿ ಪ್ರವಾಸದಲ್ಲಿ ಇದರ ಬಳಕೆಯನ್ನು ಚೆನ್ನಾಗಿ ಮಾಡಿಕೊಂಡಿದ್ದರು. ಒಂದು ಆರ್‌ಟಿಐ ಮಾಹಿತಿ ಮತ್ತು ವಿದೇಶ ಸಚಿವಾಲಯದ ವೆಬ್‌ತಾಣದಲ್ಲಿರುವ ಮಾಹಿತಿ ಪ್ರಕಾರ ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಾಡಿದ 91 ಅತೀ ವಿಶೇಷ ವಿದೇಶ ಪ್ರವಾಸದಲ್ಲಿ 27ರಲ್ಲಿ ಅವರ ಜೊತೆಗೆ ಇಟಿವಿಯ ಜಗದೀಶ್ ಚಂದ್ರ ಇದ್ದರು. ಅಲ್ಲದೆ ಸಿಎನ್‌ಎನ್ ಟಿವಿ 18 ಪತ್ರಕರ್ತ ಸಿದ್ಧಾರ್ಥ ಜರಾಬಿ 10 ಪ್ರವಾಸದಲ್ಲಿ ಜೊತೆಗಿದ್ದರು. ಇವರಲ್ಲದೆ ಇನ್ನೂ ಹಲವು ಪತ್ರಕರ್ತರು ಯುಪಿಎ ಸರ್ಕಾರದ ಸಂದರ್ಭದಲ್ಲಿ ಪ್ರಧಾನಿ ಜೊತೆ ವಿದೇಶಿ ಪ್ರವಾಸ ಮಾಡಿದ್ದಾರೆ. ವೆಬ್‌ತಾಣದಲ್ಲಿ ಹೀಗೆ ಪ್ರವಾಸ ಹೋದ ಪತ್ರಕರ್ತರ ಹೆಸರಿದೆ. ಇದರಲ್ಲಿ ಡಾ ಸುಬ್ರಮಣಿಯನ್ ಸ್ವಾಮಿಯ ಮಗಳು ಸುಹಾಸಿನಿ ಹೈದರ್ ಹೆಸರೂ ಇದೆ. ಸುಹಾಸಿನಿ ನ್ಯೂಸ್ 18ರಲ್ಲಿ ಆಗ ಕೆಲಸ ಮಾಡುತ್ತಿದ್ದರು. ಈಗ ಸುಹಾಸಿನಿ ದ ಹಿಂದು ಪತ್ರಿಕೆಯ ರಾಜತಾಂತ್ರಿಕ ಸಂಪಾದಕಿಯಾಗಿದ್ದಾರೆ. ಟಿವಿ ಜಾಲದಲ್ಲಿ ಎನ್‌ಡಿಟಿವಿ 44 ಮತ್ತು ಸಿಎನ್‌ಎನ್ 18 ತಂಡ 43 ವಿದೇಶಿ ಪ್ರವಾಸದಲ್ಲಿ ಪ್ರಧಾನಿಯ ಜೊತೆಗಿತ್ತು. ಪತ್ರಿಕೆಗಳ ಪೈಕಿ ಹಿಂದು ಟಾಪ್‌ನಲ್ಲಿದ್ದರೆ, ಹಿಂದೂಸ್ತಾನ್ ಟೈಮ್ಸ್ ನಂತರದ ಸ್ಥಾನದಲ್ಲಿದೆ.

ಕೃಪೆ: www.jansatta.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News