×
Ad

ಭಾರತದ ಹಾಕಿ ದಂತಕಥೆ ಮುಹಮ್ಮದ್ ಶಾಹಿದ್ ನಿಧನ

Update: 2016-07-20 11:28 IST

ಗುರ್ಗಾಂವ್ , ಜು.20:  ಹಾಕಿ ದಂತಕಥೆ ಭಾರತ  ತಂಡದ ಮಾಜಿ ನಾಯಕ ಮುಹಮ್ಮದ್ ಶಾಹಿದ್ ಗುರ್ಗಾಂವ್  ಆಸ್ಪತ್ರೆಯೊಂದರಲ್ಲಿ ಬುಧವಾರ ನಿಧನರಾದರು.

ಲಿವರ್‌ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುಹಮ್ಮದ್‌ ಶಾಹಿದ್‌  ಅವರು ಮೂರು ವಾರಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದರು. ಶಾಹಿದ್‌  ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶಾಹಿದ್‌ ಅವರದ್ದು ಭಾರತದ ಹಾಕಿಯಲ್ಲಿ ಪ್ರಸಿದ್ದ ಹೆಸರು. 1980ರಲ್ಲಿ ಮಾಸ್ಕೊದಲ್ಲಿ  ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನ  ಜಯಿಸಿದ ಭಾರತದ ಹಾಕಿ ತಂಡದ ಸದಸ್ಯರಾಗಿದ್ದರು. 
1960, ಎಪ್ರಿಲ್‌ 14ರಂದು ಉತ್ತರ ಪ್ರದೇಶದ ವಾರಣಾಶಿಯಲ್ಲಿ ಜನಿಸಿದ್ದ ಶಾಹಿದ್‌ 1979ರಲ್ಲಿ ತನ್ನ ಹತ್ತೊಂಬತ್ತನೆ ಹರೆಯದಲ್ಲಿ ಫ್ರಾನ್ಸ್‌ನಲ್ಲಿ ನಡೆದ ಜೂನಿಯರ್‌ ವರ್ಲ್ಡ್‌ ಕಪ್‌ನಲ್ಲಿ ಭಾಗವವಹಿಸುವ ಮೂಲಕ ಅಂತರಾಷ್ಟ್ರೀಯ ಹಾಕಿ ಪ್ರವೇಶಿಸಿದ್ದರು.ಭಾರತ ಹಾಕಿ ತಂಡದ ನಾಯಕರಾದರು. ಅವರ ನಾಯಕತ್ವದಲ್ಲಿ 1980ರ ಒಲಿಂಪಿಕ್ಸ್‌ನಲ್ಲಿ ಭಾರತ  ಕೊನೆಯ ಬಾರಿ   ಚಿನ್ನ ಗೆದ್ದುಕೊಂಡಿತ್ತು.  ಶಾಹಿದ್‌ ಅವರು 1985-86ರಲ್ಲಿ ಅರ್ಜುನ್‌ ಅವಾರ್ಡ್‌, 1981ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 1986ರಲ್ಲಿ ಹಾಕಿಯಿಂದ ನಿವೃತ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News