×
Ad

"ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ"

Update: 2016-07-20 13:45 IST

ಹೊಸದಿಲ್ಲಿ,ಜು.20: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು "ವಿಶ್ವದ 10 ಪ್ರಮುಖ ಅಪರಾಧಿಗಳ ಪಟ್ಟಿಯಲ್ಲಿ ಸೇರಿಸಿದ" ಆರೋಪಕ್ಕಾಗಿ ಗೂಗಲ್ ವಿರುದ್ಧ ಇದೀಗ ಕಾನೂನು ಸಮರ ಆರಂಭವಾಗಿದೆ. ಅಲಹಾಬಾದ್ ಹೈಕೋರ್ಟ್ ಈ ಸಂಬಂಧ ಜಾಗತಿಕ ಸರ್ಚ್ ಇಂಜಿನ್ ಸಂಸ್ಥೆಗೆ ನೋಟಿಸ್ ನೀಡಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಗೂಗಲ್, ಅದರ ಸಿಇಒ ಹಾಗೂ ಕಂಪೆನಿಯ ಭಾರತೀಯ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ. ಗೂಗಲ್ ಹಾಗೂ ಅದರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ವಕೀಲರೊಬ್ಬರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಈ ನೋಟಿಸ್ ಜಾರಿಗೊಳಿಸಿದೆ. ಗೂಗಲ್ ಸರ್ಚ್ ಇಂಜಿನ್‌ನಲ್ಲಿ, ವಿಶ್ವದ ಹತ್ತು ಮಂದಿ ಅಪರಾಧಿಗಳು ಎಂದು ಟೈಪ್ ಮಾಡಿದರೆ ಮೋದಿಯವರ ಚಿತ್ರ ಬರುತ್ತದೆ ಎಂದು ಅರ್ಜಿದಾರರು ದೂರಿದ್ದಾರೆ.

ಪ್ರಧಾನಿ ಮೋದಿಯವರ ಚಿತ್ರವನ್ನು ಕಿತ್ತು ಹಾಕುವಂತೆ ಗೂಗಲ್‌ಗೆ ಪತ್ರ ಬರೆದಿದ್ದರೂ, ಯಾವ ಕ್ರಮವನ್ನೂ ಕೈಗೊಂಡಿಲ್ಲ ಎನ್ನುವುದು ಅವರ ಆರೋಪ. ಇಂಥ ಏಕಸ್ವಾಮ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಗೂಗಲ್ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News