ಪುಟ್ಟ ಮನೆಯೊಳಗೇ ಮೀನು, ತರಕಾರಿ ಬೆಳೆಸಿ ಆದಾಯ ಗಳಿಸುತ್ತಿರುವ ಸುಲೈಮಾನ್

Update: 2016-07-21 11:30 GMT

 ಕೋಟಯ್ಕಲ್, ಜುಲೈ 21:ಇರುವುದು ನಾಲ್ಕೆ ಸೆಂಟ್ಸ್ ಸ್ಥಳ. ಅದರಲ್ಲಿ ಒಂದು ಮನೆ.ಮತ್ತೆ ಎಲ್ಲಿಮೀನು ಸಾಕುವುದು? ಆದರೆ ಮೀನು ಸಾಕಲು ಎಕರೆಗಟ್ಟಲೆ ಸ್ಥಳದ ಅಗತ್ಯವಿಲ್ಲ ಎಂಬುದನ್ನು ಕೇರಳದ ಕೋಟಯ್ಕಲ್‌ನ ಕ್ಲಾರಿ ಮುಚ್ಚಿಕ್ಕಲ್ ಚೋಲ ಎಂಬಲ್ಲಿನ ನಿವಾಸಿ ಸುಲೈಮಾನ್ ನಿಜ ಮಾಡಿ ತೋರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮನೆಯ ಟೆರೇಸ್‌ನಲ್ಲಿ ಅವರು ಮೀನುಕೃಷಿ ಮಾಡುತ್ತಿದ್ದು ಅಷ್ಟೇಅಲ್ಲ ಮನೆಯ ಬೆಡ್‌ರೂಂವರೆಗೂ ಮೀನುಸಾಕಣೆ ನಡೆಸಿ ಕಡಿಮೆ ಸ್ಥಳದಲ್ಲಿ ಮೀನು ಕೃಷಿ ಸಾಧ್ಯ ಎಂದು ತೋರಿಸಿದ್ದಾರೆ.

ಸುಲೈಮಾನ್ ಪೆಯಿಟಿಂಗ್ ಕೆಲಸಮಾಡುತ್ತಿದ್ದು ಇವರು ಮೀನು ಸಾಕಣೆಗಿಳಿದು ಇಪ್ಪತ್ತು ವರ್ಷ ಕಳೆದಿವೆ. ಸ್ಥಳದ ಅಭಾವ ಇರುವುದರಿಂದ ಟೆರೆಸ್‌ನಲ್ಲಿ ಟ್ಯಾಂಕ್ ಕಟ್ಟಿಸಿ ಮೀನು ಸಾಕಲು ಸುಲೈಮಾನ್ ನಿರ್ಧರಿಸಿದ್ದರು. ಇದಕ್ಕೆ ಅಗತ್ಯವಾದ ಸಿದ್ಧತೆಗಳೊಂದಿಗೆಯೇ ಮನೆ ಕಟ್ಟಿಸಿದ್ದೇನೆ ಎಂದು ಅವರು ಹೇಳುತ್ತಾರೆ.

 ಪಂಚಾಯತ್‌ನಿಂದ ಸಿಗುವ ಮೀನುಮರಿಗಳನ್ನು ತಂದು ಮನೆಗೆ ಸೇರಿದಂತೆ ಕಟ್ಟಲಾಗಿದ್ದ ಒಂದು ಟ್ಯಾಂಕ್‌ನಲ್ಲಿ ಸಾಕುತ್ತಾರೆ. ನಂತರ ಅದು ಬೆಳೆದಾಗ ಟೆರೆಸ್‌ನ ಟ್ಯಾಂಕ್‌ಗೆ ಹಾಕುತ್ತಾರೆ. ಮೀನು ಸಾಕಲು ಅಗತ್ಯವಾದ ನೀರನ್ನು ಬೋರ್‌ವೆಲ್ ನಿಂದ ಪಡೆಯುತ್ತಿದ್ದಾರೆ. ನೀರಿನ ಅಭಾವವಾಗದಂತೆ ಸೂಕ್ತ ಬದಲಿ ವ್ಯವಸ್ಥೆಯನ್ನು ಸುಲೈಮಾನ್ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಪೆಯಿಟಿಂಗ್ ವಸ್ತುಗಳನ್ನು ಇಡುವ ಸ್ಥಳ.ಬೆಡ್‌ರೂಂ ಹೀಗೆ ಎಲ್ಲೆಂದರಲ್ಲಿ ಮೀನು ಸಾಕುವ ತೊಟ್ಟಿಗಳನ್ನು ಇರಿಸಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.

  ಮೀನುಸಾಕಣೆಯಿಂದ ಸಿಗುವ ವರಮಾನಕ್ಕಿಂತಲೂ ಅದನ್ನು ಸಾಕುವ ತೃಪ್ತಿ ಮುಖ್ಯ ಎನ್ನುವ ಸುಲೈಮಾನ್ ಪರಿಶ್ರಮ, ಖರ್ಚು ಹೆಚ್ಚಾದ ರೂ ಮೀನು ಸಾಕಣೆಯಿಂದ ಪ್ರತಿಯೊಂದು ಸೀಸನ್‌ನಲ್ಲಿ ಸಾಕಷ್ಟು ವರಮಾನ ಸಿಗುತ್ತದೆ ಎನ್ನುತ್ತಾರೆ. ಗೆಳೆಯರ ಮುಖಾಂತರ ಮೀನು ಮಾರಾಟ ಮಾಡಿಸುತ್ತಾರೆ. ಮಾತ್ರವಲ್ಲ ಸುಲೈಮಾನ್ ಟೆರೆಸ್‌ನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಬೆಂಡೆಕಾಯಿ, ಹಸಿರು ಮೆಣಸು, ಕ್ಯಾಬೇಜ್, ಕೇನೆ, ಚೇವು ಇತ್ಯಾದಿ ತರಕಾರಿಗಳನ್ನು ಅವರು ಬೆಳೆಯುತ್ತಾರೆ. ಮೀನು ಸಾಕಣೆಯ ಟ್ಯಾಂಕ್‌ನ ಎಡೆಯಲ್ಲಿ ಉಳಿಯುವ ಸ್ಥಳವನ್ನು ಅವರು ಬಳಸಿಕೊಂಡಿದ್ದಾರೆ.

   ಇಷ್ಟೇ ಅಲ್ಲ ಕೋಳಿ, ಬಾತುಕೋಳಿ ಸಾಕುವ ಮೂಲಕ ಅವರು ಗಮನಸೆಳೆದಿದ್ದಾರೆ. ಈ ಕೆಲಸದಲ್ಲಿ ಅವರಿಗೆ ಅಮ್ಮ. ಪತ್ನಿ ಐವರು ಮಕ್ಕಳನ್ನೊಳಗೊಂಡ ಸಂಸಾರ ನೆರವಾಗುತ್ತಿದೆ. ಹತ್ತನೆ ಕ್ಲಾಸ್‌ನಲ್ಲಿ ಕಲಿಯುತ್ತಿರುವ ಅಬ್ದುಸ್ಸಲಾಂಗೆ ಮೀನುಸಾಕಣೆಯೆಂದರೆ ಬಲು ಇಷ್ಟ. ಕೃಷಿ ಮಾಡಲು ಮಣ್ಣಲ್ಲ ಮನಸ್ಸು ಅಗತ್ಯವೆಂದು ಸುಲೈಮಾನ್ ಹೇಳುತ್ತಾರೆಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News