ಪೊಗ್ಬಾಗೆ ಮಾಂಚೆಸ್ಟರ್ ಯುನೈಟೆಡ್‌ನ ಬಂಪರ್ ಆಫರ್

Update: 2016-07-21 15:24 GMT

ಪ್ಯಾರಿಸ್, ಜು.21: ಜುವೆಂಟ್ಸ್ ಮತ್ತು ಫ್ರಾನ್ಸ್ ತಂಡದ  ಮಿಡ್ ಫೀಲ್ಡರ್ ಪಾಲ್ ಪೊಗ್ಬಾ ಅವರಿಗೆ   ಇಂಗ್ಲಿಷ್ ದೈತ್ಯ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸೇರ್ಪಡೆಗೆ 100 ಮಿಲಿಯನ್ ಪೌಂಡ್ ಮೊತ್ತದ ಆಫರ್ ನೀಡಲಾಗಿದೆ.
ಯುನೈಟೆಡ್‌ನ ಮ್ಯಾನೆಜರ್ ಜೋಸ್ ವೌರಿನೊ ಅವರು 23ರ ಹರೆಯದ ಪೊಗ್ಬಾವರನ್ನು ಯುನೈಟೆಡ್‌ನ ತೆಕ್ಕೆಗೆ ಹಾಕಿಕೊಳ್ಳಲು ತಯಾರಿ ನಡೆಸಿದ್ದಾರೆ.
ಯುನೈಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಡ್ವರ್ಡ್ ವುಡ್ವಾರ್ಡ್ ಅವರನ್ನು ಈ ಸಂಬಂಧ ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಈ ಹಿಂದೆ ರಿಯಲ್ ಮ್ಯಾಡ್ರೆಡ್‌ನ ಗಾರೆಟ್ ಬೇಲ್ 2013ರಲ್ಲಿ ದಾಖಲೆಯ 85 ಮಿಲಿಯನ್ ಪೌಂಡ್ ಮೊತ್ತಕ್ಕೆ ರಿಯಲ್ ಮ್ಯಾಡ್ರಿಡ್ ಸೇರಿದ್ದರು.ಅ ಬಳಿಕ ಇದೀಗ ಪೊಗ್ಬಾ ದಾಖಲೆ ನಿರ್ಮಿಸುವ ಕಡೆಗೆ ಹೆಜ್ಜೆ ಇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News