×
Ad

ಮೀನುಗಾರರಿಗೆ ಉಪಯುಕ್ತ ಉಪಕರಣ ರೂಪಿಸಿದ ಚೆನ್ನೈ ಬಾಲಕನಿಗೆ ಗೂಗಲ್ ಪ್ರಶಸ್ತಿ

Update: 2016-07-22 14:37 IST

ಚೆನ್ನೈನ 14 ವರ್ಷದ ಬಾಲಕ ಮೀನುಗಾರರ ಸುರಕ್ಷೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಸಾಧನವೊಂದನ್ನು ತಯಾರಿಸಿದ್ದಕ್ಕಾಗಿ ಗೂಗಲ್ ಕಮ್ಯುನಿಟಿ ಇಂಪಾಕ್ಟ್ ಪ್ರಶಸ್ತಿ ಪಡೆದಿದ್ದಾರೆ.

ಅದ್ವಯ್ ರಮೇಶ್ ಏಷ್ಯಾದಲ್ಲೇ 107 ದೇಶಗಳಿಂದ ಬಂದ ಸಾವಿರಾರು ಪ್ರಾಜೆಕ್ಟ್‌ಗಳ ನಡುವೆ ಗೂಗಲ್‌ನಿಂದ ಮೊದಲ ಪ್ರಶಸ್ತಿ ಪಡೆದಿದ್ದಾನೆ. ಈ ಪ್ರಶಸ್ತಿಯನ್ನು 2006 ಗೂಗಲ್ ಸೈನ್ಸ್ ಫೇರ್ ಭಾಗವಾಗಿ ನೀಡಲಾಗಿದೆ. ಪರಿಸರ, ಆರೋಗ್ಯ ಮತ್ತು ಮೂಲಸಂಪನ್ಮೂಲಗಳಿಗೆ ಸಂಬಂಧಿಸಿದ ಪ್ರಾಜೆಕ್ಟ್‌ಗಳಿಗೆ ಪ್ರಶಸ್ತಿ ಕೊಡಲಾಗುತ್ತದೆ.

ಅದ್ವಯ್ ಮಾಡಿದ ಪ್ರಾಜೆಕ್ಟಿಗೆ "ಫಿಷರ್ಮೆನ್ ಲೈಫ್ಲೈನ್ ಟರ್ಮಿನಲ್" ಎಂದು ಹೆಸರಿಸಲಾಗಿದೆ. ಈ ಪ್ರಶಸ್ತಿಯಿಂದ ಅದ್ವಯ್ ಸೈಂಟಿಫಿಕ್ ಅಮೆರಿಕನ್‌ನ ಒಂದು ವರ್ಷದ ತರಬೇತಿಯಲ್ಲಿ ಮೀನುಗಾರರ ಉತ್ಪಾದನೆ ಮತ್ತು ಸುರಕ್ಷೆಗೆ ಜಿಪಿಎಸ್ ಬಳಸುವ ಪ್ರಾಜೆಕ್ಟ್ ಮಾಡಲು 10,000 ಡಾಲರ್ ನಗದು ಸಿಗಲಿದೆ.

ಮೀನುಗಾರರು ರಾಮೇಶ್ವರಂನಲ್ಲಿ ಯಾವಾಗಲೂ ಸಮಸ್ಯೆ ಎದುರಿಸುತ್ತಿರುವುದು ಅದ್ವಯ್‌ಗೆ ತಿಳಿದಿತ್ತು. ಸಮುದ್ರದಲ್ಲೇ ಹಗಲಿರುಳು ಕಳೆಯುವಾಗ ಕೆಲವೊಮ್ಮೆ ಅಂತಾರಾಷ್ಟ್ರೀಯ ಸಾಗರ ಗಡಿ ಉಲ್ಲಂಘನೆಗಾಗಿ ಶ್ರೀಲಂಕಾದ ಪಡೆ ಮೀನುಗಾರರನ್ನು ಬಂಧಿಸಿದ್ದೂ ಇದೆ. ಸ್ಥಳವನ್ನಾಧರಿಸಿದ ಮಾಹಿತಿಯನ್ನು ಮೀನುಗಾರರಿಗೆ ಕೊಡುವುದರಿಂದ ಈ ಸಮಸ್ಯೆ ಪರಿಹರಿಸಬಹುದು ಎನ್ನುತ್ತಾರೆ ಅದ್ವಯ್.

ಚೆನ್ನೈನ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಅದ್ವಯ್ 10ನೇ ತರಗತಿ ವಿದ್ಯಾರ್ಥಿ. ಅವರು ಗ್ರಾಂಡ್ ಪ್ರೈಜ್ ಸ್ಕಾಲರ್ಶಿಪ್ ಪಡೆಯುವ 20 ಮಂದಿಯ ಅಂತಿಮ ಸುತ್ತಿನಲ್ಲಿದ್ದಾರೆ. ಈ ಪ್ರಶಸ್ತಿ ಗೆದ್ದವರಿಗೆ 50,000 ಡಾಲರ್ ಸ್ಕಾಲರ್ ಶಿಪ್ ಸಿಗಲಿದೆ. ಈಗಿನ ಪ್ರಶಸ್ತಿ ಗೆದ್ದ ಕಾರಣ ಕಲಿಕೆ ಮತ್ತು ಪ್ರಾಜೆಕ್ಟ್ ಅಭಿವೃದ್ಧಿ ಮಾಡಲು ನೆರವಾಗಿದೆ ಎಂದು ಅದ್ವಯ್ ಖುಷಿಯಾಗಿದ್ದಾರೆ.

ಗೂಗಲ್ ಆರಿಸಿರುವ 100 ಅಂತಿಮ ಸುತ್ತಿನ ಸ್ಪರ್ಧಿಗಳಲ್ಲಿ 14 ಭಾರತೀಯರಿದ್ದಾರೆ. ಇವರು ಅಂತಿಮ 16ರಲ್ಲಿ ಬರಲು ಸ್ಪರ್ಧಿಸಲಿದ್ದಾರೆ. ಜಾಗತಿಕ ಅಂತಿಮ ಸುತ್ತು ಪಡೆದ 16 ಮಂದಿ ಮೌಂಟೈನ್ ವ್ಯೆನಲ್ಲಿ ಗೂಗಲ್‌ನ ಆರನೇ ವಾರ್ಷಿಕ ಪ್ರಶಸ್ತಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಕೃಪೆ: www.scoopwhoop.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News