ಅಫ್ಘಾನಿಸ್ತಾನದಲ್ಲಿ ಅಪಹರಣಕ್ಕೊಳಗಾಗಿದ್ದ ಜುಡಿತ್ ಡಿ ಸೋಜ ಬಿಡುಗಡೆ
Update: 2016-07-23 11:40 IST
ಹೊಸದಿಲ್ಲಿ, ಜು.23: ಆರು ವಾರಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಅಪಹರಣಕ್ಕೊಳಗಾಗಿದ್ದ ಎನ್‌ಜಿಒ ಅಗಾಖಾನ್ ಪ್ರತಿಷ್ಠಾನದ ತಾಂತ್ರಿಕ ಸಲಹೆಗಾರ್ತಿಯಾಗಿ ಭಾರತದ ಮಹಿಳೆ ಜುಡಿತ್ ಡಿ ಸೋಜಾ (40) ಶನಿವಾರ ಬಿಡುಗಡೆಗೊಂಡಿದ್ದಾರೆ.
ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಎನ್‌ಜಿಒ ಅಗಾಖಾನ್ ಪ್ರತಿಷ್ಠಾನದ ತಾಂತ್ರಿಕ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಜುಡಿತ್ ಡಿ ಸೋಜಾ ಅವರನ್ನು ತನ್ನ ಕಚೇರಿಯ ಹೊರಗಿನಿಂದ ಜೂನ್ 9ರಂದು ಶಂಕಿತ ಉಗ್ರರು ಅಪಹರಿಸಿದ್ದರು.
ಈ ಘಟನೆಯ ಬಳಿಕ ಆಕೆಯ ಕುಟುಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ, ಜುಡಿತ್ ಅವರ ಬಿಡುಗಡೆಗೆ ಆಗ್ರಹಿಸಿತ್ತು.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ಜುಡಿತ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅದರೆ ಅವರನ್ನು ಎಲ್ಲಿ ಪತ್ತೆ ಹಚ್ಚಲಾಗಿದೆ ಎನ್ನುವ ಬಗ್ಗೆ ವಿವರ ನೀಡಿಲ್ಲ