ಈ ಕಾಲೇಜು ಡ್ರಾಪ್ ಔಟ್ ಆಟೋ ಡ್ರೈವರ್ ಕಾರ್ಪೋರೇಟ್ ಕಂಪೆನಿಗಳಲ್ಲಿ ಅತಿಥಿ ಉಪನ್ಯಾಸಕ!
ಹನ್ನೆರಡನೇ ತರಗತಿಗೇ ಶಾಲೆ ತೊರೆದ ಅಣ್ಣಾದೊರೈ ಅಲಿಯಾಸ್ ಅಟೋ ಅಣ್ಣಾದೊರೈ 2012ರಲ್ಲಿ ತಮ್ಮ ಆಟೋದ ಮೂಲಕ ಚೆನ್ನೈಯನ್ನೇ ನಿಬ್ಬೆರಗಾಗಿಸಿದರು. ಮ್ಯಾಗಝಿನ್, ಪುಸ್ತಕ, ಸುದ್ದಿಪತ್ರಿಕೆ, ಸಣ್ಣ ಟೀವಿ ಮತ್ತು ವೈಫೈ ಸಂಪರ್ಕವನ್ನು ಆಟೋಗೆ ಕೊಟ್ಟರು.
ಈ ಆಟೋ ಪ್ರತಿಯೊಬ್ಬರಲ್ಲೂ ಅಚ್ಚರಿ ಮೂಡಿಸಿತ್ತು. ಅಂದಿನಿಂದ ಅವರು ಬಹಳ ದೂರ ಬಂದಿದ್ದಾರೆ. ಈಗ ಅಣ್ಣಾ ದೊರೈ ಅಟೋವನ್ನು ಬಹಳಷ್ಟು ಮಂದಿ ಮೆಚ್ಚಿಕೊಳ್ಳುತ್ತಾರೆ. ಫೇಸ್ಬುಕಲ್ಲಿ ಅವರಿಗೆ 10,000 ಮಂದಿ ಬೆಂಬಲಿಗರಿದ್ದಾರೆ. ಕಾರ್ಪೋರೇಟ್ ಕಚೇರಿಯಲ್ಲಿ 40ಕ್ಕೂ ಅಧಿಕ ಭಾಷಣಗಳು ಮತ್ತು ಎರಡು TED ಭಾಷಣಗಳನ್ನು ಮಾಡಿದ್ದಾರೆ. ಅಟೋ ಅಣ್ಣಾದೊರೈ ವೊಡಾಫೋನ್, ಹ್ಯೂಂಡೈ, ರಾಯಲ್ ಎನ್ಫೀಲ್ಡ್, ಡಾನ್ಫಸ್ ಮತ್ತು ಗಮೇಸ ಮೊದಲಾದ ಉದ್ಯೋಗಿಗಳನ್ನು ಸಂಪರ್ಕಿಸಿದ್ದಾರೆ. ವಿಭಿನ್ನ ಭಾರತೀಯ ನಗರಗಳಿಗೆ ಹೋಗಿ ಮಾತನಾಡಿದ್ದಾರೆ.
ಈಗ ತಮ್ಮ ಅಟೋದ ಸೌಲಭ್ಯಗಳಿಗೆ ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಐಪಾಡ್ ಕೂಡ ಸೇರಿಸಿದ್ದಾರೆ. ಓಲ್ಡ್ ಮಹಾಬಲಿಪುರಂ ರಸ್ತೆಯಲ್ಲಿ ಪ್ರವಾಸ ಮಾಡುವಾಗ ಬ್ರೌಸ್ ಮಾಡಬೇಕೆಂದರೆ ಪ್ರಯಾಣಿಕರು ಅವುಗಳನ್ನು ಬಳಸಬಹುದು. ಚಿಲ್ಲರೆ ವ್ಯವಹಾರ ಬೇಡವೆಂದು ಸ್ವೈಪಿಂಗ್ ಯಂತ್ರವನ್ನು ಪ್ರಯಾಣಿಕರಿಗಾಗಿ ಇಟ್ಟಿದ್ದಾರೆ. ದೂರಕ್ಕೆ ತಕ್ಕಂತೆ ಅವರು ರು. 10, 15, 20 ಅಥವಾ 25 ತೆಗೆದುಕೊಳ್ಳುತ್ತಾರೆ.
ಉಚಿತ ಮತ್ತು ಬೆಲೆಕಡಿತದ ಚಾಲನೆಯನ್ನು ವಿಶೇಷ ದಿನಗಳಲ್ಲಿ ಕೊಡುತ್ತಾರೆ. ಅಧ್ಯಾಪಕರಿಗೆ ನಿತ್ಯವೂ ಬೆಲೆ ಕಡಿತದ ಕೊಡುಗೆ ಇದೆ. ಪ್ರೇಮಿಗಳ ದಿನದಂದು ಪ್ರೇಮಿಗಳಿಗೆ, ಮಕ್ಕಳ ಜೊತೆ ಪ್ರಯಾಣಿಸುವ ಮಹಿಳೆಯರಿಗೆ ಅಮ್ಮಂದಿರ ದಿನ ಕಡಿತದ ಕೊಡುಗೆ ಇದೆ. ಪ್ರತೀ ಪ್ರಯಾಣಿಕನಿಗೂ ಖುಷಿ ಕೊಡುವುದು ಅಣ್ಣಾ ಉದ್ದೇಶ. ಅವರು ತಿಂಗಳಿಗೆ ರೂ. 45,000 ದುಡಿದರೆ, ರೂ. 9,000ವನ್ನು ವಿಭಿನ್ನ ಸೇವೆ ಒದಗಿಸಲು ಬಳಸುತ್ತಾರೆ. ತಮ್ಮ ಆಟೋವನ್ನು ಟ್ರಾಕ್ ಮಾಡಿ, ಸೀಟ್ ಇದೆಯೇ ನೋಡಿ ಪ್ರಯಾಣಿಸಲು ಪ್ರಯಾಣಿಕರಿಗೆ ಸಾಧ್ಯವಾಗುವಂತೆ ಆ್ಯಪ್ ಬಸಲು ಅಣ್ಣಾ ಪ್ರಯತ್ನಿಸುತ್ತಿದ್ದಾರೆ.
ಕೃಪೆ:social.yourstory.com