ಮುಝಫರ್‌ಪುರದಲ್ಲಿ ದಲಿತರನ್ನು ಥಳಿಸಿ ಮೂತ್ರ ಕುಡಿಸಿದ ಗುಂಪು
Update: 2016-07-23 23:22 IST
ಮುಝಫರ್‌ಪುರ,ಜು.23: ಬಿಹಾರದ ಮುಝಫರ್‌ಪುರ ಜಿಲ್ಲೆಯ ಬಾಬುರಾಮ್ ಗ್ರಾಮದಲ್ಲಿ ಮೋಟರ್‌ಬೈಕ್ ಕದ್ದ ಆರೋಪದಲ್ಲಿ ಗುಂಪೊಂದು ಇಬ್ಬರು ದಲಿತ ಯುವಕರನ್ನು ತೀವ್ರವಾಗಿ ಥಳಿಸಿ, ಅವರಲ್ಲೋರ್ವನ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಪಾರೂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಥಳಿತಕ್ಕೊಳಗಾಗಿರುವ ಯುವಕರ ಪೈಕಿ ಓರ್ವನಾಗಿರುವ ರಾಜೀವ ಕುಮಾರ್ ಪಾಸ್ವಾನ್‌ನ ತಾಯಿ ಶುಕ್ರವಾರ ಈ ಎಫ್‌ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದರು. ಸ್ಥಳೀಯ ಪಂಚಾಯತ್ ಮುಖ್ಯಸ್ಥೆಯ ಪತಿ ಮುಕೇಶ್ ಠಾಕೂರ್ ಸೇರಿದಂತೆ 11 ಜನರನ್ನು ದೂರಿನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಯುವಕರನ್ನು ಥಳಿಸಲಾಗಿದೆ ಎನ್ನುವುದನ್ನು ಪೊಲೀಸರು ದೃಢಪಡಿಸಿದ್ದಾರೆ,ಆದರೆ ಅವರ ಪೈಕಿ ಮುನ್ನಾ ಪಾಸ್ವಾನ್‌ಗೆ ಮೂತ್ರವನ್ನು ಕುಡಿಸಿರುವ ಆರೋಪವನ್ನು ಅವರು ತಿರಸ್ಕರಿಸಿದ್ದಾರೆ.