×
Ad

ಗೋವಾದ ಕ್ರಿಕೆಟಿಗ ಜಕಾತಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ

Update: 2016-07-23 23:53 IST

ಪಣಜಿ,ಜು.23: ಕ್ರಿಕೆಟಿಗ ಶಾದಾಬ್ ಜಕಾತಿ(35) ಅವರು ಕಳೆದ ಜನವರಿಯಲ್ಲಷ್ಟೇ ರಚನೆಯಾಗಿರುವ ಗೋವಾ ಫಾರ್ವರ್ಡ್(ಜಿಎಫ್) ಪಕ್ಷಕ್ಕೆ ಇಂದು ಸೇರುವ ಮೂಲಕ ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿದರು.
ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿರುವ ಜಕಾತಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗೋವಾ ಪರವಾಗಿ ಮತ್ತು ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಪರವಾಗಿ ಆಡುತ್ತಿದ್ದಾರೆ. 2008ರಿಂದ 2013ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದ ಅವರು,2014ರಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ತಂಡದ ಪರವಾಗಿ ಆಡಿದ್ದರು.
ಕ್ರಿಕೆಟ್ ನನ್ನ ಜೀವವಾಗಿದೆ. ಗೋವಾವನ್ನು ಮುಂದಕ್ಕೊಯ್ಯಲು(ಗೋವಾ ಫಾರ್ವರ್ಡ್) ಮತ್ತು ರಾಜಕೀಯವನ್ನು ಸಂಭಾವಿತರ ಆಟವನ್ನಾಗಿಸಲು ಇದು ಸಕಾಲವಾಗಿದೆ ಎಂದು ಜಕಾತಿ ಜಿಎಫ್ ಸೇರ್ಪಡೆ ಸಂದರ್ಭದಲ್ಲಿ ಹೇಳಿದರು.
ಜಕಾತಿ ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದರೆ ಪಕ್ಷವು ಅವರಿಗೆ ಟಿಕೆಟ್ ನೀಡಲಿದೆ ಎಂದು ಜಿಎಫ್ ವಕ್ತಾರ ದುರ್ಗಾದಾಸ ಕಾಮತ್ ತಿಳಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News