ಮಂಗಳೂರು: ‘ತೌಳವ ಪ್ರಶಸ್ತಿ’ ಪ್ರದಾನ

Update: 2016-07-23 18:30 GMT

ಮಂಗಳೂರು, ಜು. 23: ತುಳು ನಾಟಕ ಕಲಾವಿದರ ಒಕ್ಕೂಟದ 13ನೆ ವಾರ್ಷಿಕ ಸಂಭ್ರಮ ಹಾಗೂ ತೌಳವ ಪ್ರಶಸ್ತಿ ಪ್ರದಾನ ನಗರದ ಪುರಭವನದಲ್ಲಿ ಶನಿವಾರ ರಾತ್ರಿ ನಡೆಯಿತು.
ಹಿರಿಯ ನಾಟಕಕಾರರಾದ ರತ್ನಾಕರ ರಾವ್ ಕಾವೂರು ಹಾಗೂ ವಸಂತ ವಿ. ಅಮೀನ್‌ರಿಗೆ ಎರಡು ವರ್ಷಗಳ ತೌಳವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ನೆರವೇರಿಸಿದರು. ಒಕ್ಕೂಟದ ಅಧ್ಯಕ್ಷ ಕಿಶೋರ್‌ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳಾ ದೇವಿ ಸೇವಾ ಸಮಿತಿ ಗೌರವಾಧ್ಯಕ್ಷ ಬಿ. ಅಶೋಕ್ ಕುಮಾರ್, ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ಸೀತಾರಾಮ ಎ., ಲಯನ್ಸ್ ಜಿಲ್ಲೆ 317ಡಿ ಪ್ರಾಂತೀಯ ಅಧ್ಯಕ್ಷೆ ಲೋಕೇಶ್ ಬೋಳಾರ್ ಉಪಸ್ಥಿತರಿದ್ದರು.
ಕಲಾವಿದರಾದ ಡಿ.ಎಸ್. ಬೋಳೂರು (ರಂಗನಟ), ಭಾಸ್ಕರ ಕುಲಾಲ್ (ಸ್ತ್ರೀ ಪಾತ್ರಧಾರಿ), ಪ್ರಭಾಕರ ರಾವ್ (ಪ್ರಸಾದನ), ಸುಧಾಕರ ಕದ್ರಿ (ಸಂಗೀತ), ಕೆ. ಯುವರಾಜ್ (ವೇಷಭೂಷಣ), ನಿರ್ಮಲಾ ಎಸ್. ಶೆಟ್ಟಿ (ರಂಗನಟಿ), ಬಿ.ಉಮೇಶ್ ಅಮೀನ್ (ಹಿರಿಯ ನಟ), ಗಿರೀಶ್ ಪಲಿಮಾರು (ಪ್ರಸಾದನ), ಎಚ್.ವರದರಾಜ್ ರಾವ್ (ಸಂಗೀತ), ಎನ್. ಸಂಕಪ್ಪ ರೈ (ರಂಗ ವ್ಯವಸ್ಥೆ), ವಸಂತಿ ಜೆ. ಪೂಜಾರಿ (ರಂಗನಟಿ), ಶೇಖರ್ ಶೆಟ್ಟಿ ಹೊಗೆಬೈಲು (ನಟ) ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು ಸ್ವಾಗತಿಸಿದರು. ಗೌರವಾಧ್ಯಕ್ಷ ರೋಹಿದಾಸ್ ಕದ್ರಿ, ಪದಾಧಿಕಾರಿಗಳಾದ ಮೋಹನ ಕೊಪ್ಪಳ ಕದ್ರಿ, ಕ್ಷೇಮನಿಧಿ ಸಂಚಾಲಕ ಪ್ರದೀಪ್ ಆಳ್ವ, ಗೌರವ ಸಂಚಾಲಕ ಚರಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News