×
Ad

ಮಹಿಳೆಗೆ ಕಿರುಕುಳ ಆರೋಪ: ಆಪ್ ಶಾಸಕ ಸೆರೆ

Update: 2016-07-24 15:43 IST

ಹೊಸದಿಲ್ಲಿ,ಜುಲೈ 24: ಆಮ್ ಆದ್ಮಿ ಪಾರ್ಟಿಯ ಓಕ್ಲಾ ಶಾಸಕ ಅಮಾನುಲ್ಲಾ ಖಾನ್‌ರನ್ನುದಿಲ್ಲಿಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಶಾಸಕರು ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಡಾ. ಸಮೀನಾ ಎಂಬ ಮಹಿಳೆಯು ಕಳೆದ ಜುಲೈ 20ರಂದು ಜಾಮಿಯ ನಗರ ಠಾಣೆಯಲ್ಲಿ ಶಾಸಕ ಅಮಾನುಲ್ಲಾ ತನ್ನ ಅತ್ಯಾಚಾರ ಹಾಗೂ ಕಾರಿನಲ್ಲಿ ಅಪಹರಿಸುವ ಬೆದರಿಕೆಯೊಡ್ಡಿದ್ದಾರೆಂದು ದೂರು ನೀಡಿದ್ದರು. ವಿದ್ಯುತ್ ಸರಬರಾಜು ಕುರಿತ ದೂರಿನೊಂದಿಗೆ ಡಾ.ಸಮೀನಾ ಶಾಸಕರ ಮನೆಗೆ ಹೋಗಿದ್ದರು. ಅಂದು ಶಾಸಕರು ತನಗೆ ಬೆದರಿಕೆಹಾಕಿದ್ದಾರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಶಾಸಕ ಅಮಾನುಲ್ಲಾ ಮಹಿಳೆಯ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದು ಮಹಿಳೆ ತಾನು ಬೆದರಿಕೆಯೊಡ್ಡಿದ್ದೆ ಎಂದು ತಿಳಿಸಿದ ದಿನ ತಾನು ದಿಲ್ಲಿಯಲ್ಲಿರಲಿಲ್ಲ ಮೀರತ್‌ನಲ್ಲಿದ್ದೆ ಎಂದು ಹೇಳಿದ್ದಾರೆಂದು ವರದಿತಿಳಿಸಿದೆ. ಅದೇ ವೇಳೆ ಅಮಾನುಲ್ಲಾರ ಆಮ್ ಆದ್ಮಿ ಪಾರ್ಟಿ ದಿಲ್ಲಿ ಪೊಲೀಸರು ಶಾಸಕರನ್ನು ಸಿಕ್ಕಿಸಿಹಾಕಲು ಮಹಿಳೆಯ ಮೂಲಕ ತಂತ್ರ ಹೆಣದಿದ್ದಾರೆ ಎಂದು ಆರೋಪಿಸಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆಪ್ ಶಾಸಕರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News