ಚೀನದಲ್ಲಿ ಭಾರೀ ಮಳೆ, ಜಲಪ್ರಳಯ

Update: 2016-07-24 10:21 GMT

ಬೀಜಿಂಗ್,ಜುಲೈ 24: ಚೀನದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ನೆರೆಯಿಂದಾಗಿ ಸುಮಾರು 150ಮಂದಿ ಮೃತರಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆಂದುವರದಿಯಾಗಿದೆ.ಅಲ್ಲಿನ ಮಧ್ಯ ಹುಬೈನಲ್ಲಿ ಸುಮಾರು ಎರಡೂವರೆ ಲಕ್ಷಮಂದಿ ನೆರೆಯ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿತಿಳಿಸಿದೆ. ಹುಬೈ ಪ್ರಾಂತದ ತಿಹಾನ್ಮೆನ್ ನಗರ ಆಡಳಿತ ’ಜುಲೈ 18ರಿಂದ 20ರವರೆಗೆ ನಿರಂತರ ಸುರಿದ ಮಳೆಯಿಂದಾಗಿ ಶೇ.6.80ಕ್ಕೂ ಅಧಿಕ ಮಂದಿ ಪ್ರಭಾವಿತರಾಗಿದ್ದು,ಹತ್ತು ನಗರಗಳು ನೆರೆಯ ತೆಕ್ಕೆಯಲ್ಲಿದೆ’ ಎಂದು ತಿಳಿಸಿದೆ.

ಸರಕಾರಿ ಸುದ್ದಿಸಂಸ್ಥೆ ಶಿನ್‌ಹುವಾದ ವರದಿ ಪ್ರಕಾರ ರಕ್ಷಣಾ ಕಾರ್ಯ ಜಾರಿಯಲ್ಲಿದೆ ಇದಕ್ಕಾಗಿ ಐನೂರಕ್ಕೂ ಅಧಿಕ ಸೈನಿಕರು ಹಾಗೂ ಸಾವಿರ ಮಂದಿಯನ್ನು ಹಾಗೂ 62 ಸ್ಪೀಡ್ ಬೋಟ್‌ಗಳನ್ನು ಪರಿಹಾರ ಕಾರ್ಯದಲ್ಲಿ ತೊಡಗಿಸಲಾಗಿದೆ. ಹುಬೈ ಪ್ರಾಂತದಲ್ಲಿ ಕೊನೆಪಕ್ಷ 114 ಮಂದಿಯ ಶವಗಳು ದೊರೆತಿವೆ 111ಮಂದಿ ನಾಪತ್ತೆಯಾಗಿದ್ದಾರೆ. ಸ್ಥಳೀಯಾಡಳಿತ ಸುಮಾರು 3.10ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಿದೆ. ಮಳೆ ಹಾಗೂ ನೆರೆಯಿಂದಾಗಿ ಹಲವು ಸ್ಥಳಗಳಲ್ಲಿ ಭೂಕುಸಿತವಾಗಿದೆ.ಇದರಿಂದಾಗಿ 52,900 ಮನೆಗಳು ಕುಸಿದುಬಿದ್ದಿವೆ. 1,55,000 ಮನೆಗಳು ಹಾನಿಗೀಡಾಗಿವೆ. 700.000 ಹೆಕ್ಟೆರ್‌ಗೂ ಅಧಿಕ ಪ್ರದೇಶದ ಕೃಷಿಬೆಳೆಗಳು ನಾಶವಾಗಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News