×
Ad

ಹಾಜಿ ಭಾಯ್ ಅವರ ಕಲ್ಲಿನ ಅಡುಗೆಗೆ ಶಾರುಖ್ ಕೂಡ ಫ್ಯಾನ್ !

Update: 2016-07-24 19:31 IST

ಕಳೆದ 26 ವರ್ಷಗಳಲ್ಲಿ 50 ವರ್ಷದ ಹಾಜಿ ಭಾಯ್ ಮಾಂಸ, ಮೀನು, ಅಕ್ಕಿ, ತರಕಾರಿ ಮತ್ತು ದೇಶಿ ಚೈನೀಸ್ ಅಡುಗೆಯಲ್ಲಿ ಪರಿಣತರು. ಅವರ ನಿಜವಾದ ಹೆಸರು ನಫೀಸ್ ಅನ್ಸಾರಿಯನ್ನು ಮರೆಸಿ ಹಾಜಿ ಭಾಯ್ ಪತ್ತರ್ ಕೇ ಸನಂ ಎಂದೇ ಖ್ಯಾತರಾಗಿದ್ದಾರೆ. ಮುಂಬೈನಲ್ಲಿ ಕಲ್ಲಿನ ಮೇಲೆ ಅಡುಗೆ ಮಾಡುವ ಏಕೈಕ ಅಡುಗೆಯಾತ ಇವರು. 50 ಕೇಜಿಗಳ 2.5 ಅಡಿ ಉದ್ದದ ಕಲ್ಲುಗಳನ್ನು ಅವರು ಸೌದಿ ಅರೆಬಿಯದಿಂದ ಆಮದು ಮಾಡಿಕೊಂಡಿದ್ದಾರೆ. ಸ್ಟೀಲ್ ಸ್ಟಾಂಡಿನ ಮೇಲೆ ಈ ಕಲ್ಲುಗಳಿವೆ.

ಕಲ್ಲಿನ ಮೇಲೆ ಸಾಮಾನ್ಯವಾಗಿ ಮಾಂಸ ಮತ್ತು ಕಬಾಬ್‌ಗಳು ಮಾತ್ರ ಆಗುತ್ತವೆ. ಆದರೆ ಹಾಜಿ ಭಾಯ್ ಇಷ್ಟಕ್ಕೇ ಸೀಮಿತರಾಗಿಲ್ಲ. ಚಿಕನ್ ಟಿಕ್ಕಾ ಮಸಾಲ, ಡಬ್ಬಾ ಘೋಸ್ಟ್, ಬಕ್ರಾ ತಂದೂರ್ ಎಲ್ಲಾ ಇಲ್ಲಿ ಲಭ್ಯವಿದೆ. ಪಾಲಕ್ ಪನೀರ್ ಮತ್ತು ತರಕಾರಿ ಕೂರ್ಮವೂ ಇಲ್ಲಿ ಸಿಗುತ್ತದೆ. ದೇಶಿ ಚೈನೀಸ್, ಫ್ರೈಡ್ ರೈಸ್ ಮತ್ತು ಚಿಲ್ಲಿ ಚಿಕನ್ ಕೂಡ ತಯಾರಿಸುತ್ತಾರೆ. ಇವರ ಕಲ್ಲಿನ ಅಡುಗೆ ಕಲೆಗಾಗಿಯೇ ಇಲ್ಲಿನ ತಿನಿಸಿಗೆ ಪತ್ತರ್ ಕಾ ಮುರ್ಗ್, ಪತ್ತರ್ ಕಾ ಕೂರ್ಮ, ಮುರ್ಗ್ ಪತ್ತರ್ ಎನ್ನುವ ಹೆಸರು ಬಂದಿದೆ.

ಕಲ್ಲೇ ಏಕೆ?

ಕಲ್ಲಿನ ಮೇಲೆ ಅಡುಗೆ ಮಾಡುವುದು 2000 ವರ್ಷಗಳ ಹಿಂದೆ ಆರಂಭವಾಯಿತು. ಅರಬರು ಇದನ್ನು ಕಲಿಸಿದ್ದಾರೆ. 1982ರಲ್ಲಿ ಸೌದಿ ಅರೆಬಿಯಕ್ಕೆ ಅಡುಗೆಯಾಳಾಗಿ ಹೋದಾಗ ಹಾಜಿ ಭಾಯ್ ಮೊದಲು ಕಲ್ಲಿನಲ್ಲಿ ಅಡುಗೆ ಮಾಡಿದ್ದರು. ಅಲ್ಲಿ ಬಹುತೇಕ ಕುರಿ ಸಾಂಬಾರ್ ಮತ್ತು ಟಿಕ್ಕಾಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಕಲ್ಲಿನ ಮೇಲೆ ಅಡುಗೆ ಮಾಡುವುದು ಆಹಾರಕ್ಕೆ ಹೊಸ ರುಚಿ ತರುತ್ತದೆ ಎಂದು ಅಲ್ಲೇ ಅವರು ಕಲಿತಿದ್ದರು. ಮಾಂಸ ಮತ್ತು ತರಕಾರಿಗಳ ರುಚಿ ತವಾದ ಮೇಲೆ ಬದಲಾಗುತ್ತದೆ. ಕಲ್ಲಿನ ಮೇಲೆ ಅಡುಗೆ ಮಾಡುವುದು ಬಹಳ ಸರಳ ಎಂದು ಅವರಿಗೆ ಅನಿಸಿತ್ತು. ನೀವು ಕಲ್ಲಿದ್ದಲು ಸ್ಟಾಂಡಿಗೆ ಹಾಕಿ ಕಲ್ಲನ್ನು ಬಿಸಿ ಮಾಡಬೇಕು. ಮಾಂಸ, ಮೀನು ಅಥವಾ ತರಕಾರಿ ಅದರ ಮೇಲಿಟ್ಟು ಬೇಯಿಸಿದರೆ ಮುಗಿಯಿತು. ಕೆಲವೊಮ್ಮೆ ಸ್ವಲ್ಪ ಎಣ್ಣೆ ಮತ್ತು ಕೆಲವೊಮ್ಮೆ ಎಣ್ಣೆಯೇ ಹಾಕುವುದಿಲ್ಲ. ಹೀಗಾಗಿ ಆಹಾರ ಆರೋಗ್ಯಕಾರಿ ಮತ್ತು ರುಚಿಯಾಗಿರುತ್ತದೆ ಎನ್ನುತ್ತಾರೆ ಹಾಜಿ ಭಾಯ್.

ಕಳೆದ ವರ್ಷ ಐಪಿಎಲ್ ಪಾರ್ಟಿಯಲ್ಲಿ ಅಡುಗೆ ಮಾಡಲು ಜ್ಯೂಹಿ ಚಾವ್ಲಾರ ಬ್ರೀಚ್ ಕ್ಯಾಂಡಿ ಮನೆಗೆ  ಶಾರುಖ್ ಖಾನ್ ಕರೆದದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.  ಶಾರುಖ್ ರಿಗೆ ಹಾಜಿ ಭಾಯ್ ಆಹಾರ ಬಹಳ ಇಷ್ಟವಾಗಿತ್ತು. 20 ಕಿಲೋ ಕಲ್ಲಿದ್ದಲಿನಿಂದ ಕಲ್ಲನ್ನು ಬಿಸಿ ಮಾಡಲು ಸ್ವಲ್ಪ ಸಮಯ ಹಿಡಿಯುತ್ತದೆ. ಬಿಸಿಯಾದ ಮೇಲೆ ಗಂಟೆಗಟ್ಟಲೆ ಅದರ ಮೇಲೆ ಬೇಯಿಸಬಹುದು. ಆಹಾರ ವೇಗವಾಗಿ ಬೇಯುತ್ತದೆ. ಮಾಂಸ ಐದೇ ನಿಮಿಷದಲ್ಲಿ ಬೇಯುತ್ತದೆ.

ಸುಲಭದ ಸಾಧನೆಯಲ್ಲ

ಸೌದಿಯಿಂದ ಮರಳಿ ಬಂದ ಹಾಜಿ ಭಾಯ್‌ಗೆ ಮುಂಬೈನಲ್ಲಿ ಕಲ್ಲು ಹಾಕಿ ಅಡುಗೆ ಮಾಡುವುದು ಸುಲಭವಾಗಿರಲಿಲ್ಲ. ಬಿಸಿಯಿಂದ ಕಲ್ಲುಗಳು ಬೇಗನೇ ಒಡೆದು ಹೋಗುತ್ತಿದ್ದವು. ಅವರು ಮಧ್ಯಪ್ರಾಚ್ಯದಿಂದಲೇ ಅವುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಆಮದು ಮಾಡಿದ ಕಲ್ಲನ್ನು ಕತ್ತರಿಸಿ, ಫಿನಿಷಿಂಗ್ ಮತ್ತು ಪಾಲಿಶಿಂಗ್ ಕೊಡಲಾಗುತ್ತದೆ. ನಿತ್ಯವೂ ಕಲ್ಲನ್ನು ಸ್ವಚ್ಛ ಮಾಡಲಾಗುತ್ತದೆ. ಬ್ಯುಸಿಯಾಗಿರುವ ಅಡುಗೆ ಕೆಲಸಗಳಿಂದ ಬೇಗನೇ ಅವು ಒಡೆಯುತ್ತವೆ. ಬಿಸಿ ಕಡಿಮೆ ಮಾಡಲು ಕಲ್ಲಿಗೆ ನೀರು ಹಾಕುವುದರಿಂದ ಅವು ಬೇಗನೇ ಒಡೆಯುತ್ತವೆ. ವಿಭಿನ್ನ ರೀತಿಯ ಆಹಾರಕ್ಕಾಗಿ ಅವರ ಬಳಿ 7 ಕಲ್ಲುಗಳಿವೆ. ಕೋಳಿ, ಕುರಿ, ಮೀನು ಎಲ್ಲವೂ ಪ್ರತ್ಯೇಕ ಕಲ್ಲುಗಳ ಮೇಲಾಗುತ್ತವೆ. ಪ್ರತೀ ಕಲ್ಲಿಗೆ ರೂ. 3000 ಇದೆ. ಜೊತೆಗೆ ಆಮದು ವೆಚ್ಚವೂ ಬೀಳುತ್ತದೆ. ಒಟ್ಟಾರೆ ಒಂದು ಕಲ್ಲಿಗೆ ರೂ. 54,000 ಬೀಳುತ್ತದೆ. ಹಾ ಜಿ ಭಾಯ್ ಆ ಬಗ್ಗೆ ಯೋಚಿಸುವುದಿಲ್ಲ.

ಹಾಜಿ ಭಾಯ್ 500 ಮಂದಿಯ ಊಟಕ್ಕೆ ರೂ. 6000 ತೆಗೆದುಕೊಳ್ಳುತ್ತಾರೆ. ಅವರನ್ನು 9322343280 ನಂಬರಲ್ಲಿ ಸಂಪರ್ಕಿಸಬಹುದು.

ಕೃಪೆ: www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News