ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು: ಆರೆಸ್ಸೆಸ್
ತಿರುವನಂತಪುರಂ,ಜುಲೈ 25: ಶಬರಿಮಲೆಗೆ ಮಹಿಳೆಯರಿಗೆ ಹೋಗಲು ಅವಕಾಶ ನೀಡಬೇಕೆಂದು ಆರೆಸ್ಸೆಸ್ ತನ್ನ ನಿಲುವನ್ನು ಮತ್ತೊಮ್ಮೆ ಪುನರಾವರ್ತಿಸಿದೆ. ದೇಶದಲ್ಲಿ ಹೆಚ್ಚಿನ ದೇವಳಗಳಿಗೆ ಮಹಿಳೆಯರು ಹೋಗಬಹುದಾದರೆ ಶಬರಿಮಲೆಯಲ್ಲಿ ಇನ್ನೊಂದು ರೀತಿಯ ನಿಲುವು ಬೇಕಾಗಿಲ್ಲ ಎಂದು ಆರೆಸ್ಸೆಸ್‌ನ ಪ್ರಮುಖರಲ್ಲೊಬ್ಬರಾದ ಭಯ್ಯೆಜಿ ಜೋಷಿ ಅಭಿಪ್ರಾಯ ಪಟ್ಟಿದ್ದಾರೆಂದು ವರದಿ ತಿಳಿಸಿದೆ.
ಎಲ್ಲಿ ಪುರುಷನಿಗೆ ಪ್ರವೇಶ ಇದೆಯೋ ಅಲ್ಲಿ ಸ್ತ್ರೀಯರಿಗೂ ಪ್ರವೇಶ ನೀಡಬೇಕು. ಇದು ಆರೆಸ್ಸೆಸ್‌ನ ನಿಲುವುಆಗಿದೆ ಎಂದು ಅವರು ಒಂದು ಟೆಲಿವಿಷನ್ ಚ್ಯಾನೆಲ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಯಾವುದೇ ಆಚರಣೆ ತಪ್ಪೆಂದು ಅನಿಸಿದರೆ ಅದನ್ನು ತೊರೆಯಬೇಕು. ನೂರುವರ್ಷಗಳಿಂದಲೂ ಮುಂದುವರಿಯುತ್ತಿದೆ ಎಂದು ಹೇಳಿ ಅದೇ ಆಚರಣೆ ಈಗಲೂ ಮುಂದುವರಿಯಬೇಕೆಂಬ ನಿಲುವು ಆರೆಸ್ಸೆಸ್‌ಗೆ ಸಮ್ಮತಾರ್ಹವಲ್ಲ ಎಂದು ಭಯ್ಯೆಜಿ ಹೇಳಿದ್ದಾರೆ.ಇಡೀ ದೇಶದಲ್ಲಿ ಕೆಲವು ದೇವಳಗಳಲ್ಲಿ ಮಾತ್ರ ಮಹಿಳೆಯರ ಪ್ರವೇಶಕ್ಕೆ ನಿಷೇಧ ಇವೆ.ಅದುಕೂಡಾ ಸರಿಯಲ್ಲ ಎಂದು ಆರೆಸ್ಸೆಸ್‌ನ ನಿಲುವುಆಗಿದೆ ಎಂದು ಅವರು ಹೇಳಿದ್ದಾರೆಂದು ವರದಿ ತಿಳಿಸಿದೆ.