×
Ad

ಬಿಜೆಪಿಯಿಂದ ಕೇಜ್ರಿವಾಲ್ ಫೋಟೊ ಇರುವ 400 ಕೋಟಿ ರೂ. ನೋಟು ಬಿಡುಗಡೆ!

Update: 2016-07-25 17:27 IST

ಹೊಸದಿಲ್ಲಿ,ಜುಲೈ 25: ಬಿಜೆಪಿ ಬಿಡುಗಡೆಗೊಳಿಸಿದ 400ಕೋಟಿ ರೂ. ನೋಟು ವಿವಾದಗ್ರಸ್ತವಾಗಿದ್ದು ಬಿಜೆಪಿ ಮುದ್ರಿಸಿದ್ದ ಈ ನೋಟ್‌ನಲ್ಲಿ ಮಹಾತ್ಮ ಗಾಂದಿ ಇರಬೇಕಾದಲ್ಲಿ ಅರವಿಂದ ಕೇಜ್ರಿವಾಲ್‌ರ ಫೋಟೊ ಇದೆ. ಸಾವಿರ ರೂಪಾಯಿ ನೋಟಿನ ನಕಲಿನಂತೆ ಕಾಣುವ ನೋಟ್‌ನಲ್ಲಿ 1000ರೂಪಾಯಿ ಎಂದು ಬರೆಯಬೇಕಾದಲ್ಲಿ 400ಕೋಟಿರೂ. ಎಂದು ಬರೆಯಲಾಗಿದೆ ಎಂದು ವರದಿಯಾಗಿದೆ.

 ಗಾಂಧೀಜಿ ಇರಬೇಕಾದಲ್ಲಿ ಇರುವ ಕೇಜ್ರಿವಾಲ್‌ರ ಟೋಪಿಯಲ್ಲಿ ಹಗರಣಗಳ ಪಾರ್ಟಿಎಂದು ಬರೆಯಲಾಗಿದೆ. ನೋಟಿನಲ್ಲಿರಾಷ್ಟ್ರೀಯ ಚಿಹ್ನೆ ಇರಬೇಕಾದಲ್ಲಿ ಆಮ್ ಆದ್ಮಿಪಾರ್ಟಿಯ ಚಿಹ್ನೆ ಹಿಡಿಸೂಡಿ ಇದೆ. ಜೊತೆಗೆ 420 ಎಂದೂ ಬರೆಯಲಾಗಿದೆ ಎಂದು ವರದಿ ತಿಳಿಸಿದೆ. ದಿಲ್ಲಿ ಬಿಜೆಪಿ ಈ ನೋಟನ್ನು ಬಿಡುಗಡೆಗೊಳಿಸಿದ್ದು, ಜನರು ಕರಪತ್ರ ಇತ್ಯಾದಿಗಳನ್ನು ಎಸೆದು ಬಿಡುತ್ತಾರೆ ಅದರೆ ಈ ರೀತಿಯ ನೋಟುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ನಾವು ಈ ರೀತಿಯ ಮೂವತ್ತಾರು ಸಾವಿರ ನೋಟುಗಳನ್ನು ಮುದ್ರಿಸಿದ್ದೇವೆ. ಹಾಗೂ ಕೇಜ್ರಿವಾಲ್‌ರ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುತ್ತಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News