×
Ad

ಜಪಾನ್ ಅಂಗವಿಕಲರ ಕೇಂದ್ರದಲ್ಲಿ ಚೂರಿ ದಾಳಿ: ಕನಿಷ್ಠ 19 ಬಲಿ

Update: 2016-07-26 08:34 IST

ಟೋಕಿಯೊ, ಜು.26: ಜಪಾನ್‌ನ ಅಂಗವಿಕಲರ ಕೇಂದ್ರವೊಂದರಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದ ಚೂರಿ ದಾಳಿಯಲ್ಲಿ ಕನಿಷ್ಠ 19 ಮಂದಿ ಮೃತಪಟ್ಟು, 24 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಕ್ಯೋಡೊ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಸಂಬಂಧ ಪಶ್ಚಿಮ ಟೋಕಿಯೊದ ಸಗಮಿಹರ ಪೊಲೀಸರು 20 ವರ್ಷದ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುಂಜಾನೆ 2:30ರ ವೇಳೆಗೆ ಅಂಗವಿಕಲರ ಕೇಂದ್ರದ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ, ವ್ಯಕ್ತಿಯೊಬ್ಬ ಚೂರಿ ಹಿಡಿದುಕೊಂಡು ತ್ಸುಕಿ ಯಮಯುರಿ ಗಾರ್ಡನ್‌ನಲ್ಲಿ ಹತ್ಯೆ ಮಾಡುತ್ತಿದ್ದಾನೆ ಎಂದು ದೂರು ನೀಡಿದರು.

ಆ ಬಳಿಕ ವ್ಯಕ್ತಿಯೊಬ್ಬ ಠಾಣೆಯಲ್ಲಿ ಹಾಜರಾಗಿ ನಾನೇ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News