ಮಾನವ ಹಕ್ಕು ಆಯೋಗದ ಬಗ್ಗೆ ಜಾಗೃತಿ ಅಗತ್ಯ:ಆಯುಕ್ತ ಅಲೋಕ್‌ ಕುಮಾರ್

Update: 2016-07-27 11:40 GMT

ಕಾರವಾರ,ಜು.27:ಮಾನವಾಧಿಕಾರ ಉಲ್ಲಂಘನೆಯಾಗದಂತೆ ಮಾನವ ಹಕ್ಕು ಆಯೋಗ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನವ ಹಕ್ಕು ಆಯೋಗದ ಆಯುಕ್ತ ಅಲೋಕ್‌ಕುಮಾರ್ ಹೇಳಿದರು.

ಅವರು ನಗರದ ದಿವೆಕರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾನವಹಕ್ಕು ಆಯೋಗದ ಜಿಲ್ಲಾ ಸಮಿತಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಜನ ಸಾಮಾನ್ಯರು ಮಾನವ ಹಕ್ಕಿನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಯಾವುದೇ ಇಲಾಖೆಯಲ್ಲಿ ಜನರ ಮೇಲೆ ನಡೆಯಬಹುದಾದ ದೌರ್ಜನ್ಯ, ಕಿರುಕುಳ ಹಾಗೂ ರಕ್ಷಣೆಗೆ ಮಾಡಿ ಸಮಾನತೆ ಕಾಪಾಡುತ್ತಿದೆ ಎಂದರು.

ಮಾನವಾಧಿಕಾರದ ಬಗ್ಗೆ ಇನ್ನು ಅನೇಕರಿಗೆ ತಿಳಿದಿಲ್ಲ. ಅಲ್ಲದೆ ಗ್ರಾಮೀಣ ಪ್ರದೇಶ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಾಗದ ಅವಶ್ಯಕತೆ ಇದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನ್ಯಾಯವಾಧಿ ಎಸ್. ಪಿ. ಕಾಮತ್ ಬಾಲಕಾರ್ಮಿಕರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನದಲ್ಲಿ ಅದಕ್ಕೆ ಕಡಿವಾಣ ಅಗತ್ಯವಾಗಿದೆ ಎಂದರು. ಮಾನವ ಹಕ್ಕು ಆಯೋಗದ ರಾಜ್ಯ ಸಂಘಟನಾ ಅಧ್ಯಕ್ಷ ಸ್ಟಾನ್ಲಿ ಕನಿಕರಾಜ್ ಪಾಲ್ಗೊಂಡು ಮಾತನಾಡಿದರು. ಮಾನವ ಹಕ್ಕು ಆಯೋಗದ ರಾಷ್ಟ್ರೀಯ ಅಧ್ಯಕ್ಷ ರಾಬರ್ಟ್ ಡಿಸೋಜಾ ಅಧ್ಯಕ್ಷತೆ ವಹಿಸಿ ಹಿಂದೆ ದೇಶ ದೇಶದ ನಡುವೆ ಯುದ್ಧಗಳು ಪ್ರಾರಂಭವಾಗಿದ ಸಂದರ್ಭದಲ್ಲಿ ಎಲ್ಲೆಡೆ ಮಾನವ ಹಕ್ಕು ಉಲ್ಲಂಘನೆ ಪ್ರಾರಂಭವಾಗಿದ್ದವು. ಅಂದು ವಿಶ್ವ ಸಂಸ್ಥೆ ಮಾನವ ಹಕ್ಕು ಆಯೋಗ ಮುಂದಿನ ಪೀಳಿಗೆಗೆ ಸಹಕಾರಿಯಾಗಲಿ ಎಂದು ಆಯೋಗದ ರಚನೆಯಾಯಿತು.

ಇಂದಿನ ದಿನದಲ್ಲಿ ಪ್ರತಿಯೊಬ್ಬರುವ ಮಾನವಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಜೊತೆಗೆ ರಕ್ಷಣೆ ಜಾಗೃತಿಯೂ ಮುಖ್ಯವಾಗಿದೆ. ಎಲ್ಲಾದರೂ ಮಾನವಹಕ್ಕು ಉಲ್ಲಂಘನೆಯಾದರೇ ಹೋರಾಟಕ್ಕಿ ಇಳಿಯುವುದು ಸರಿಯಲ್ಲ. ಸಮಸ್ಯೆ ಬಗ್ಗೆ ಅರಿತು ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಾನವ ಹಕ್ಕು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿ ಘೋಷಣೆ ಮಾಡಲಾಯಿತು.

ರಾಷ್ಟ್ರೀಯ ಉಪಾಧ್ಯಕ್ಷ ರಾಕೇಶ ಡಿ.ಆರ್, ರಾಷ್ಟ್ರೀಯ ಕಾರ್ಯದರ್ಶಿ ಮುರಲಿ ನಾಯ್ಡು, ಮಾನವಹಕ್ಕು ಆಯೋಗದ ಶಿವಮೊಗ್ಗ ಜಿಲ್ಲಾ ಸಮಿತಿ ಅಧ್ಯಕ್ಷ ಸಂತೋಷ ಬೆಲ್ಲೇಕೇರೆ, ದಿವೆಕರ್ ಕಾಲೇಜಿನ ಪ್ರಾಂಶುಪಾಲ ಬಿ. ಎಚ್. ನಾಯಕ ವೇದಿಕೆಯಲ್ಲಿದ್ದರು.

ಮಾನವ ಹಕ್ಕು ಆಯೋಗದ ಜಿಲ್ಲಾ ಸಮಿತಿ ಪದಾಧಿಕಾರಿಗಳು:

ಕಾರವಾರದ ವಿಜಯಕುಮಾರ್ ನಾಯಕ(ಜಿಲ್ಲಾಧ್ಯಕ್ಷ), ಶಿರಸಿಯ ಡಾ. ರಾಘವೇಂದ್ರ ಕಾಮತ್(ಜಿಲ್ಲಾ ಉಪಾಧ್ಯಕ್ಷ), ನ್ಯಾಯವಾದಿ ನಾಗರಾಜ್ ನಾಯಕ(ಜಿಲ್ಲಾ ಪ್ರಧಾನ ಕಾರ್ಯದರ್ಶಿ) ಮುಂಡಗೋಡಿ ಬಸವರಾಜ್ ಓಶೀಮಠ(ಜಿಲ್ಲಾ ಜಂಟಿ ಕಾರ್ಯದರ್ಶಿ), ಕುಮಟಾದ ರವಿಕುಮಾರ್ ನಾಯ್ಕ (ಜಿಲ್ಲಾ ಖಜಾಂಚಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರಜ್ ಹೆಗಡೆ, ಜಯದೇವ್ ನಿಲೇಕಣಿ, ಎ. ಎ. ಶೇಖ್, ಎಸ್. ಕೆ. ಶಾನಭಾಗ್, ಯೋಗೇಶ್ ಪಾಟೀಲ್, ಪಿಆರ್‌ಓ ಆಗಿ ದೇವಾನಂದ ಆರ್. ಸಿ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News