ಏನು ಬೇಕಾದರೂ ಆಗಬಹುದು: ಒಬಾಮ
Update: 2016-07-27 20:56 IST
ವಾಶಿಂಗ್ಟನ್, ಜು. 27: ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಪರವಾಗಿ ತಿರುಗಿಸಲು ರಶ್ಯ ಪ್ರಯತ್ನಿಸುತ್ತಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
‘‘ಏನು ಬೇಕಾದರೂ ಆಗಬಹುದು’’ ಎಂದು ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಒಬಾಮ ಅಭಿಪ್ರಾಯಪಟ್ಟರು. ಈ ಮೂಲಕ, ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಇಮೇಲ್‌ಗಳು ಸೋರಿಕೆಯಾದ ಕೃತ್ಯದಲ್ಲಿ ರಶ್ಯದ ಕೈವಾಡವಿದೆ ಎಂದು ಶಂಕಿಸುವಲ್ಲಿ ಅಮೆರಿಕ ಇನ್ನೂ ಒಂದು ಹೆಜ್ಜೆ ಮುಂದೆ ಹೋದಂತಾಗಿದೆ.
ಆದರೆ, ಈ ಆರೋಪವನ್ನು ರಶ್ಯ ನಿರಾಕರಿಸಿದೆ.