×
Ad

ಮಹಾಶ್ವೇತಾ ದೇವಿ ನಿಧನಕ್ಕೆ ಸಂತಾಪದಲ್ಲಿ ಎಡವಟ್ಟು: ಸುಷ್ಮಾಗೆ ಮುಜುಗರ

Update: 2016-07-29 18:18 IST

ಹೊಸದಿಲ್ಲಿ, ಜು. 29 : ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಮಹಾಶ್ವೇತಾ ದೇವಿ ಇತ್ತೀಚಿಗೆ ನಿಧನರಾದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತ ಪಡಿಸಿದರು. 

ಆದರೆ ಟ್ವಿಟ್ಟರ್ ನಲ್ಲಿ ಭಾರೀ ಸಕ್ರಿಯವಾಗಿರುವ ಸುಶ್ಮಾ ಸ್ವರಾಜ್ ಸಂತಾಪ ಸೂಚಿಸುವಾಗ ಒಂದು ದೊಡ್ಡ ಎಡವಟ್ಟನ್ನೇ ಮಾಡಿ ಬಿಟ್ಟರು. 'ಪ್ರಥಮ್ ಪ್ರತಿಶ್ರುತಿ' ಹಾಗು ' ಬಕುಲ್ ಕಥಾ ' ಎಂಬ ಎರಡು ಪುಸ್ತಕಗಳನ್ನು  ಹೆಸರಿಸಿ ಮಹಾಶ್ವೇತಾ ದೇವಿಯವರ ಈ ಎರಡು ಪುಸ್ತಕಗಳು ' ನನ್ನ ಮೇಲೆ ಗಾಢ ಪ್ರಭಾವ ಬೀರಿವೆ ' ಎಂದು ಬರೆದುಬಿಟ್ಟರು.

ಆದರೆ ಈ ಎರಡೂ ಪುಸ್ತಕಗಳು ಇನ್ನೋರ್ವ ಬಂಗಾಳಿ ಸಾಹಿತಿ ಆಶಾಪೂರ್ಣ ದೇವಿ ಅವರ ಕೃತಿಗಳು !

 ಇದನ್ನು ಟ್ವಿಟ್ಟರ್ ಬಳಕೆದಾರರು ತಕ್ಷಣ ಸುಶ್ಮಾ ಗಮನಕ್ಕೆ ತಂದರು. ತಡ ಮಾಡದೆ ಸುಷ್ಮಾ ಟ್ವೀಟ್ ಡಿಲೀಟ್ ಮಾಡಿದರು. ಆದರೆ ಅಷ್ಟೊತ್ತಿಗೆ ಆ ಟ್ವೀಟ್ ಸಾಕಷ್ಟು ಮಂದಿಯ ಗಮನ ಸೆಳೆದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News