ಪತ್ರಕರ್ತ ಸರಕಾರದ ಪರ ವಹಿಸಿದರೆ ಆ ಸರಕಾರ ಜನವಿರೋಧಿ ಆಗಿದೆ ಎಂದರ್ಥ : ರವೀಶ್ ಕುಮಾರ್

Update: 2016-07-30 09:41 GMT

ಹೊಸದಿಲ್ಲಿ, ಜು. 30 : ಟೈಮ್ಸ್ ನೌ ಚಾನಲ್ ನ ಅರ್ನಬ್ ಗೋಸ್ವಾಮಿ ವಿರುದ್ಧ ಹಿರಿಯ ಪತ್ರಕರ್ತೆ ಬರ್ಖಾ ದತ್ ವಾಗ್ದಾಳಿ ನಡೆಸಿದ ಬಳಿಕ ಪತ್ರಕರ್ತರ ನಡುವೆ ನಡೆಯುತ್ತಿರುವ ಚರ್ಚೆಯಲ್ಲಿ ಎನ್ ಡಿ ಟಿ ವಿ ಯ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಪ್ರವೇಶಿಸಿದ್ದಾರೆ.

ಈ ಬಗ್ಗೆ ತಮ್ಮ ಬ್ಲಾಗ್ ' ನಯೀ ಸಡಕ್ '  ನಲ್ಲಿ ಬರೆದಿರುವ ರವೀಶ್ , ಯಾವತ್ತು ಪತ್ರಕರ್ತ ಸರಕಾರದ ಪರ ವಹಿಸುತ್ತಾನೋ ಅವತ್ತು ಆ ಸರಕಾರ ಜನವಿರೋಧಿ ಆಗಿದೆ ಎಂದು ಅರ್ಥ ಎಂದು ವಿಶ್ಲೇಷಿಸಿದ್ದಾರೆ. ಈ ಮೂಲಕ ಹೆಸರು ಹೇಳದೆಯೇ ಅರ್ನಬ್ ಗೋಸ್ವಾಮಿಯನ್ನು ಅವರು ಕುಟುಕಿದ್ದಾರೆ. 

ಅವರ ಬರಹದ ಮುಖ್ಯಅಂಶ ಹೀಗಿದೆ 

" ನೀವು ಇಂದು ಒಬ್ಬ ವ್ಯಕ್ತಿಯ ಮಹತ್ವಾಕಾಂಕ್ಷೆಗಾಗಿ ಟಿವಿಯಲ್ಲಿ ನಡೆಯುತ್ತಿರುವ ತಮಾಷೆಯನ್ನು ಪತ್ರಿಕೋದ್ಯಮ ಎಂದು ತಿಳಿದಿದ್ದರೆ ಅದು ನಿಜವಲ್ಲ. ಪ್ರತಿದಿನ ನಿಮ್ಮನ್ನು ದೇಶಭಕ್ತಿ ಹಾಗು ದೇಶದ್ರೋಹದ ಚರ್ಚೆಯ ಮೂಲಕ ಸೆಳೆಯುತ್ತಿರುವ ಇದರ ಉದ್ದೇಶ ನೀವು ವಾಸ್ತವಗಳ ಕುರಿತು ಪ್ರಶ್ನಿಸಬಾರದು ಎಂದಾಗಿದೆ. ಬೇಳೆಯ ಬೆಳೆಯ ಬಗ್ಗೆ , ಹೆಚ್ಚ್ಚುತ್ತಿರುವ ಮಕ್ಕಳ ಫೀಸು ಇತ್ಯಾದಿಗಳ ಬಗ್ಗೆ ನೀವು ಮಾತನಾಡಬಾರದು. ಇದಕ್ಕಾಗಿ  ಮಾಧ್ಯಮಗಳಲ್ಲಿ ಇವತ್ತು ದೇಶಭಕ್ತಿಯ ಜಾಲ ಹರಡಲಾಗಿದೆ.  ಟಿವಿ ನಿರೂಪಕನೇ ಪತ್ರಕರ್ತರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸುವಂತೆ ಸರಕಾರಕ್ಕೆ ಹೇಳುತ್ತಿದ್ದಾನೆ. ಯಾವತ್ತು ಪತ್ರಕರ್ತ ಸರಕಾರದ ಪರ ವಹಿಸಿದನೋ, ಅವತ್ತೇ ಆ ಸರಕಾರ ಜನವಿರೋಧಿ ಆಗಿದೆ ಎಂದರ್ಥ. ಪತ್ರಕರ್ತನೇ ಪತ್ರಕರ್ತರನ್ನು ಗುರಿಯಾಗಿಸಿದರೆ ಅದು ಯಾವುದೇ ಸರಕಾರಕ್ಕೆ ಅತ್ಯಂತ ಖುಷಿಯ ವಿಷಯ. ಆಗ ಮೂಲಭೂತ ಪ್ರಶ್ನೆಗಳನ್ನು ಎತ್ತುವುದೇ ನಿಂತು ಹೋಗುತ್ತದೆ. ಪಿ ಎಫ್ ವಿಷಯದಲ್ಲಿ ಮಾಧ್ಯಮಗಳು ಗಾರ್ಮೆಂಟ್ ಕಾರ್ಮಿಕರ ಪರ ನಿಲ್ಲದಾಗ ಅವರೇ ಬೆಂಗಳೂರಿನಲ್ಲಿ ಬೀದಿಗಿಳಿದು ಸರಕಾರಕ್ಕೆ ಬಿಸಿ ಮುಟ್ಟಿಸಿದರು. ಇದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಜೆ ಎನ್ ಯು ವಿಷಯದಲ್ಲೂ ದೇಶಭಕ್ತಿಯ ಹೆಸರಲ್ಲಿ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದರು. ಆದರೆ ಅದರಲ್ಲಿ ವಿಫಲರಾದರು. ಈಗ ಕಾಶ್ಮೀರದ ಹೆಸರಲ್ಲಿ ಅದೇ ಪ್ರಯತ್ನ ಮಾಡುತ್ತಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News