ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ವಶಪಡಿಸಿಕೊಳ್ಳಬೇಕು: ಬಾಬಾ ರಾಮ್‌ದೇವ್

Update: 2016-07-30 10:02 GMT

ಹೊಸದಿಲ್ಲಿ,ಜುಲೈ 30: ಪ್ರಧಾನಿ ನರೇಂದ್ರಮೋದಿ ಪಾಕ್ ಆಕ್ರಮಿತ ಕಾಶ್ಮೀರವನ್ನುಮರಳಿ ವಶಪಡಿಸಿಕೊಳ್ಳಲು ಸಿದ್ಧರಾಗಬೇಕೆಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆಂದು ವರದಿಯಾಗಿದೆ. ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ ಯಾವ ಬೆಲೆತೆತ್ತಾದರೂ ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇನೆ ಎಂದು ಹೇಳುತ್ತಿರುವಾಗ ನಮ್ಮ ಬಳಿ ಇರುವುದು ನಾಮಮಾತ್ರದಷ್ಟು ಕಾಶ್ಮೀರವಾಗಿದೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ನಮ್ಮ ಮಕ್ಕಳು ಕಾಶ್ಮೀರವನ್ನು ಭೂಪಟದಲ್ಲಿ ಮಾತ್ರ ನೋಡಬೇಕಾಗಿದೆ. ಕಾಶ್ಮೀರದ ಹೆಚ್ಚಿನ ಭಾಗ ಪಾಕಿಸ್ತಾನದ ವಶದಲ್ಲಿದೆ ರಾಮ್ ದೇವ್ ಹೇಳಿದ್ದಾರೆಂದು ವರದಿ ತಿಳಿಸಿದೆ.

ಭಾರತವನ್ನು ನಾಶಪಡಿಸಲುಪಾಕಿಸ್ತಾನದ ಮಣ್ಣಲ್ಲಿ ಬೆಳೆಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ನಾಶಪಡಿಸಲು ನವಾಝ್ ಶರೀಫ್ ಕ್ರಮಕೈಗೊಳ್ಳಬೇಕು. ಕಾಶ್ಮೀರ ಪೂರ್ಣಗೊಳ್ಳದ ಒಂದು ಅಜೆಂಡ ಎಂದು ನವಾಝ್ ಶರೀಫ್ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದರು ಮಾತ್ರವಲ್ಲ ವಿಶ್ವಸಂಸ್ಥೆಯಲ್ಲಿ ಅವರು ನೀಡುವ ಎಲ್ಲ ಭಾಷಣಗಳಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಜಾಗತಿಕ ಬೆಂಬಲವನ್ನು ಯಾಚಿಸುತ್ತಿದ್ದಾರೆ ಎಂದು ರಾಮ್‌ದೇವ್ ಹೇಳಿದ್ದಾರೆ.ದುರ್ಬಲವಾದ ಒಂದು ದೇಶ ಅದು . ಆ ದೇಶಕ್ಕೆ ನಮ್ಮ ಭೂಮಿಯನ್ನು ಕಿತ್ತುಕೊಳ್ಳಲು ಅವಕಾಶ ನೀಡಬಾರದೆಂದು ರಾಮ್ ದೇವ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News