×
Ad

ಮುಂಬೈಯ ವಿಲೆ ಪಾರ್ಲೆ ಇನ್ನು ಕೇವಲ ವಿಲೆ !?

Update: 2016-07-30 21:00 IST

ಬೈನ ಪಾರ್ಲೆ ಬಿಸ್ಕತ್ತು ಕಾರ್ಖಾನೆ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಈಗ ಅದನ್ನು ಮುಚ್ಚುವ ಪ್ರಯತ್ನ ಸಾಗಿದೆ. ನಿವಾಸಿಗಳಿಗೆ ಕಾರ್ಖಾನೆಯಿಂದ ಬರುವ ಸಿಹಿಯಾದ ವಾಸನೆಯನ್ನು ಕಳೆದುಕೊಳ್ಳುವ ನೋವಿದೆ. ಬಿಸ್ಕತ್ತು ತಯಾರಿಸುವ ಕಂಪನಿಯ ಕುಟುಂಬ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರಕ್ಕೆ ಬಮದಿದೆ. ವಿಲೆ ಪಾರ್ಲೆ ನಿವಾಸಿಗಳ ಮಟ್ಟಿಗೆ ಅದು ಪರಂಪರೆಯನ್ನು ಸೂಚಿಸುವ ತಾಣವಾಗಿದೆ. ಕಾರ್ಖಾನೆ ನಮ್ಮ ನೆರೆಯಲ್ಲೇ ಇತ್ತು. ಅದನ್ನು ಪರಂಪರೆಯಾಗಿ ನಾವು ಕಾಣುತ್ತೇವೆ. ಈ ಕಂಪನಿ ಉತ್ತಮ ವಾಸನೆಯನ್ನು ಪರಿಸರಕ್ಕೆ ಕೊಟ್ಟಿತ್ತು. ವೆನಿಲಾ ಪರಿಮಳ ಬಂದಾಗಲೆಲ್ಲ ಕಾರ್ಖಾನೆಯ ನೆನಪಾಗಲಿದೆ ಎಂದು ವಿಲೆ ಪಾರ್ಲೆ ನಿವಾಸಿ ಸೀಮಾ ಬಜಾಜ್ ಹೇಳಿದ್ದಾರೆ.

 87 ವರ್ಷದ ಹಳೇಯ ಬಿಸ್ಕತ್ತು ಕಾರ್ಖಾನೆಯಲ್ಲಿ ಕೇಕ್ ಮತ್ತು ಕ್ಯಾಂಡಿ ಬಾರ್‌ಗಳೂ ತಯಾರಾಗುತ್ತಿದ್ದವು. ಆದರೆ ಉತ್ಪಾದನೆಯನ್ನು ಈಗ ದೇಶದ ಇತರ ಶಾಖೆಗಳಿಗೆ ವರ್ಗಾಯಿಸಲಾಗಿದೆ. ಹೀಗಾಗಿ ವಿಲೆ ಪಾರ್ಲೆ ಮುಚ್ಚಲಾಗುತ್ತಿದೆ. ಈ ಕಾರ್ಖಾನೆ ಕಳೆದ ಕೆಲ ವರ್ಷಗಳಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನೂ ಕಳೆದುಕೊಂಡಿತ್ತು. ವಿಎಸ್ ಖಾಡೆಕರ್ ಮಾರ್ಗ್‌ನಲ್ಲಿ ಸೇತುವೆ ಕೆಳಗಿರುವ ವಿಲೆ ಪಾರ್ಲೆಯ ಕಾರ್ಖಾನೆ 1929ರಲ್ಲಿ ಕ್ಯಾಂಡಿ ತಯಾರಿಸಲು ಆರಂಭವಾಗಿ 10 ವರ್ಷಗಳ ನಂತರ ಬಿಸ್ಕತ್ತು ತಯಾರಿಗೆ ಕೈ ಹಾಕಿತ್ತು.

ಕೆಲವು ನಿವಾಸಿಗರ ಪ್ರಕಾರ ಕಾರ್ಖಾನೆ ಇಲ್ಲ ಎನ್ನುವುದನ್ನು ಯೋಚಿಸುವುದೇ ಕಷ್ಟವಾಗುತ್ತದೆ. ನಾವು ಇದೇ ಪರಿಸರದಲ್ಲಿ ಪರಿಮಳದ ಜೊತೆಗೆ ಬೆಳೆದಿದ್ದೇವೆ. ಅದು ಇನ್ನು ಮರೆಯಾಗಲಿದೆ ಎಂದು ವಿಲೆ ಪಾರ್ಲೆಯ ಕವಿತಾ ಥಕ್ಕರ್ ಹೇಳಿದ್ದಾರೆ. ಮತ್ತೊಬ್ಬ ನಿವಾಸಿ ಸಾಯಿಪ್ರಸಾದ್ ಪಾಟೀಲ್ ಅವರ ಪ್ರಕಾರ ಬಿಸ್ಕತ್ತು ತಯಾರಿ ಪರಿಮಳ ಮಕ್ಕಳಿಗೆ ಬಹಳ ಪ್ರಿಯವಾಗಿತ್ತು. ನಾನು ದೇಶದಲ್ಲಿ ಎಲ್ಲೇ ಹೋದರೂ ವಿಲೆ ಪಾರ್ಲೆ ನಿವಾಸಿ ಎಂದ ಕೂಡಲೇ ಬಿಸ್ಕತ್ತು ಕಾರ್ಖಾನೆ ನೆನಪಿಸಿಕೊಳ್ಳುತ್ತಿದ್ದರು. ಕಾರ್ಖಾನೆ ಮುಚ್ಚುವುದು ದೊಡ್ಡ ನಷ್ಟ ಎನ್ನುತ್ತಾರೆ ಪಾಟೀಲ್.

ಕಾರ್ಖಾನೆ ಮುಚ್ಚುವ ಸುದ್ದಿ ಆಘಾತ ತಂದಿದೆ. ನನ್ನ ಮಗನ ಶಾಲೆ ಕಾರ್ಖಾನೆಯ ಪಕ್ಕದಲ್ಲೇ ಇತ್ತು. ಬಿಸ್ಕತ್ತು ಪರಿಮಳ ಆತನಿಗೆ ಪ್ರಿಯವಾಗಿತ್ತು ಎನ್ನುತ್ತಾರೆ ರಿಂಟು ರಾಥೋಡ್. ಸಾಂತಾಕ್ರೂಸ್ ನಿವಾಸಿಯಾಗಿರುವ ರಿಂಟು ತನ್ನ ಮಗನ ಹುಟ್ಟುಹಬ್ಬದಂದು ಕೊನೆಯ ಬಾರಿ ಕಾರ್ಖಾನೆಗೆ ಮಗನನ್ನು ಸ್ನೇಹಿತರ ಜೊತೆಗೆ ಕರೆದುಕೊಂಡು ತೋರಿಸುವ ಉದ್ದೇಶ ಹೊಂದಿದ್ದಾರೆ.

ಕೃಪೆ: www.hindustantimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News