×
Ad

ಉತ್ತರಾಖಂಡ ಮಾಜಿ ಸಚಿವ ರಾವತ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Update: 2016-07-30 19:54 IST

ಹೊಸದಿಲ್ಲಿ,ಜು.30: 32ರ ಹರೆಯದ ಮಹಿಳೆಯೋರ್ವಳ ದೂರಿನ ಮೇರೆಗೆ ದಿಲ್ಲಿ ಪೊಲೀಸರು ಉತ್ತರಾಖಂಡದ ಮಾಜಿ ಕೃಷಿ ಸಚಿವ ಹರಕ್‌ಸಿಂಗ್ ರಾವತ್ ಅವರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ರಾವತ್ ತನ್ನ ಗ್ರೀನ್ ಪಾರ್ಕ್ ನಿವಾಸದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದರೆಂದು ಮಹಿಳೆ ಆರೋಪಿಸಿದ್ದಾಳೆ.

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಹರೀಶ ರಾವತ್ ಸರಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರಕ್ ಸಿಂಗ್ ರಾವತ್ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
2014ರಲ್ಲಿಯೂ ರಾವತ್ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಉದ್ಯೋಗ ಅರಸಿ ರಾವತ್ ನಿವಾಸಕ್ಕೆ ತೆರಳಿದ್ದಾಗ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆಕೆ ಆರೋಪಿಸಿದ್ದಳು. ಇದೊಂದು ರಾಜಕೀಯ ಪ್ರೇರಿತ ಪ್ರಕರಣವೆಂದು ರಾವತ್ ಆಗ ಹೇಳಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News