ಭರವಸೆಯ ಬಾಕ್ಸರ್ ವಿಕಾಸ್ ಕೃಷ್ಣನ್

Update: 2016-07-30 18:18 GMT

ಹೊಸದಿಲ್ಲಿ, ಜು.30: ಭಾರತೀಯ ಬಾಕ್ಸಿಂಗ್‌ನ ಉಜ್ವಲ ತಾರೆ ವಿಕಾಸ್ ಕೃಷ್ಣನ್ ಬಹು ಬೇಗನೆ ಯಶಸ್ಸು ಕಂಡವರು. 2010ರ ಯೂತ್ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಹಾಗೂ ಯೂತ್ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದ್ದರು. 2010ರಲ್ಲಿ ಏಷ್ಯನ್ ಗೇಮ್ಸ್‌ನ ಲೈಟ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಚಿನ್ನದ ಪದಕ ಜಯಿಸಿದ್ದರು.

20ರ ಹರೆಯದಲ್ಲೇ ವಿಕಾಸ್ ಮೊದಲ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ವೇಲ್ಟರ್ ವೇಟ್ ವಿಭಾಗದಲ್ಲಿ ಅವರು ಕ್ವಾರ್ಟರ್ ಫೈನಲ್ ತಲುಪಿದ್ದರು. ಇಂಚೋನ್‌ನಲ್ಲಿ 2014ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ, 2015ರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಬಾಚಿಕೊಂಡಿದ್ದರು.

ಜೂನ್‌ನಲ್ಲಿ ಬಾಕುವಿನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ವಿಕಾಸ್ 2016ರ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದಿದ್ದರು.

ರಿಯೋ ಗೇಮ್ಸ್‌ನಲ್ಲಿ ಸ್ಪರ್ಧಿಸಲಿರುವ ಮೂವರು ಬಾಕ್ಸರ್‌ಗಳ ಪೈಕಿ ಓರ್ವರಾಗಿರುವ ವಿಕಾಸ್ 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಸಿಂಗ್ ಕಂಚು ಜಯಿಸಿದ್ದರು.

ಪ್ರಮುಖ ಸಾಧನೆಗಳು

ಚಿನ್ನ: ಇರಾನ್‌ನಲ್ಲಿ 2010ರ ಏಷ್ಯನ್ ಯೂತ್ ಬಾಕ್ಸಿಂಗ್ ಟೂರ್ನಿ

ಕಂಚು: ಸಿಂಗಾಪುರದಲ್ಲಿ 2010ರ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನ: ಬಾಕುನಲ್ಲಿ 2010ರ ಯೂತ್ ವರ್ಲ್ಡ್ ಅಮೆಚೂರ್ ಬಾಕ್ಸಿಂಗ್ ಟೂರ್ನಿ

ಚಿನ್ನ: ಚೀನಾದ ಗುವಾಂಗ್‌ಝೌನಲ್ಲಿ 2010ರಲ್ಲಿ ಏಷ್ಯನ್ ಗೇಮ್ಸ್ ಕಂಚು: 2011ರ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್

ಕಂಚು: 2014ರ ದ.ಕೊರಿಯಾದ ಇಂಚೋನ್ ಏಷ್ಯನ್ ಗೇಮ್ಸ್

ಬೆಳ್ಳಿ: 2015ರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್

ಬೆಸ್ಟ್ ಬಾಕ್ಸರ್: ಹೊಸದಿಲ್ಲಿಯಲ್ಲಿ 2010ರಲ್ಲಿ ನಡೆದ ನ್ಯಾಶನಲ್ ಚಾಂಪಿಯನ್‌ಶಿಪ್.

ವಿಕಾಸ್ ಕೃಷ್ಣನ್

ವಯಸ್ಸು: 24

ಜನ್ಮಸ್ಥಳ: ಹಿಸಾರ್,ಹರ್ಯಾಣ

ಸ್ಪರ್ಧೆಯ ವಿಭಾಗ: ಬಾಕ್ಸಿಂಗ್

ಇವೆಂಟ್: 75 ಕೆಜಿ

ರ್ಯಾಂಕಿಂಗ್: 06

ಸ್ಪರ್ಧೆಯ ದಿನ: ಆಗಸ್ಟ್ 8, ಸಮಯ: ರಾತ್ರಿ 9:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News