ಮಂಗಳೂರು: ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು

Update: 2016-07-31 12:49 GMT

  ಮಂಗಳೂರು,ಜು.31: ನಗರದ ಹೊರವಲಯದ ಪಂಜಿಮೊಗರು ಜಂಕ್ಷನ್ ಬಳಿ ಮುಂಜಾನೆ ಕಾರೊಂದು ನಿಯಂತ್ರಣ ತಪ್ಪಿ ಅಂಗಡಿಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ.

ಬಜ್ಪೆ ಕಡೆಯಿಂದ ಪಂಜಿಮೊಗರು ಕಡೆಗೆ ಬಮದಿದ್ದ ರಿಟ್ಜ್ ಕಾರ್ ಮೊದಲಿಗೆ ಪಂಜಿಮೊಗರು ಜಂಕ್ಷನ್ ಬಳಿಯ ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿ ಹೊಡೆದು ನಂತರ ಸಮೀಪದಲ್ಲಿದ್ದ ಅಂಗಡಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಕಾರಿಗೆ ಹಾನಿಯಾಗಿದ್ದು ,ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಅಂಗಡಿಯ ಶಟರ್ ಹಾನಿಗೀಡಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News