ಕ್ಯಾನ್ಸರ್,ಎಚ್‌ಐವಿ,ಹೃದ್ರೋಗಗಳ ಔಷಧಿಗಳ ಬೆಲೆಯಲ್ಲಿ ಶೇ.25 ಕಡಿತ

Update: 2016-08-01 15:22 GMT

ಹೊಸದಿಲ್ಲಿ,ಆ.1: ಕ್ಯಾನ್ಸರ್,ಎಚ್‌ಐವಿ,ಸೂಕ್ಷ್ಮಜೀವಿ ಸೋಂಕು,ಉದ್ವಿಗ್ನತೆ ಮತ್ತು ಹೃದ್ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ 24 ಅಗತ್ಯ ಔಷಧಿಗಳ ಪರಿಷ್ಕೃತ ಬೆಲೆಗಳನ್ನು ಸರಕಾರವು ನಿಗದಿಗೊಳಿಸಿದ್ದು, ಸರಾಸರಿ ಸುಮಾರು ಶೇ.25ರಷ್ಟು ಇಳಿಕೆ ಮಾಡಲಾಗಿದೆ.

 ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರವು ಔಷಧಿ(ಬೆಲೆ ನಿಯಂತ್ರಣ) ತಿದ್ದುಪಡಿ ಆದೇಶ,2016ರಡಿ ಅನುಬಂಧ-1ರಲ್ಲಿಯ 24 ಅನುಸೂಚಿತ ಔಷಧಿಗಳ ಗರಿಷ್ಠ ಬೆಲೆಗಳನ್ನು ಪರಿಷ್ಕರಿಸಿ ನಿಗದಿಗೊಳಿಸಿದೆ. ಜೊತೆಗೆ ಔಷಧಿ(ಬೆಲೆ ನಿಗದಿ) ಆದೇಶ,2013ರಡಿಯೂ 31 ಔಷಧಿಗಳ ಬೆಲೆಗಳನ್ನು ನಿಗದಿಗೊಳಿಸಲಾಗಿದೆ ಎಂದು ಪ್ರಾಧಿಕಾರವು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ಅಗತ್ಯ ಔಷಧಿಗಳ ಬೆಲೆಗಳನ್ನು ಸರಕಾರವೇ ನಿಗದಿಗೊಳಿಸುತ್ತದೆ. ಜೊತೆಗೆ ಎಲ್ಲ ಔಷಧಿಗಳ ಗರಿಷ್ಠ ಮಾರಾಟ ಬೆಲೆಗಳ ಮೇಲೆ ನಿಗಾಯಿರಿಸುತ್ತದೆ. ಅನುಸೂಚಿತವಲ್ಲದ ಔಷಧಿಗಳ ಬೆಲೆಗಳನ್ನು ವರ್ಷಕ್ಕೆ ಶೇ.10ರವರೆಗೆ ಹೆಚ್ಚಿಸಲು ಕಂಪನಿಗಳಿಗೆ ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News