×
Ad

ಸಿರಿಯದಲ್ಲಿ ರಶ್ಯದ ಹೆಲಿಕಾಪ್ಟರ್ ಪತನ: 5 ಸಾವು

Update: 2016-08-01 21:41 IST

ಮಾಸ್ಕೊ, ಆ. 1: ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ತನ್ನ ಒಂದು ಸರಕು ಸಾಗಾಟ ಹೆಲಿಕಾಪ್ಟರನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ. ಹೆಲಿಕಾಪ್ಟರ್‌ನಲ್ಲಿ ಐವರಿದ್ದರು.

ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಹಾಗೂ ಇಬ್ಬರು ಅಧಿಕಾರಿಗಳಿದ್ದರು. ಅವರೆಲ್ಲರೂ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಅಲೆಪ್ಪೊ ನಗರಕ್ಕೆ ಮಾನವೀಯ ನೆರವನ್ನು ನೀಡಿದ ಬಳಿಕ ವಾಪಸ್ ಬರುತ್ತಿದ್ದಾಗ ಎಂಐ-8 ಸೇನಾ ಸರಕು ಹೆಲಿಕಾಪ್ಟರನ್ನು ಉರುಳಿಸಲಾಗಿದೆ ಎಂದು ಇಂಟರ್‌ಫ್ಯಾಕ್ಸ್ ವಾರ್ತಾಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News